Advertisement

ತುರುವೇಕೆರೆ ತಾಲೂಕಿಗೆ ಹೇಮಾವತಿ ನೀರು ಹರಿಸಲು ಕ್ರಮ

11:51 AM Jun 24, 2018 | |

ತುರುವೇಕೆರೆ: ತಾಲೂಕಿಗೆ ಹೇಮಾವತಿ ನೀರನ್ನು ಹರಿಸುವ ನಿಟ್ಟಿನಲ್ಲಿ ಈಗಾಗಲೇ ಸಚಿವ ಡಿ.ಕೆ.ಶಿವಕುಮಾರ್‌ರವರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದೇನೆ. ಇನ್ನು ಇಪ್ಪತ್ತು ದಿನಗಳಲ್ಲಿ ಹೇಮಾವತಿ ನೀರು ತಾಲೂಕಿಗೆ ಹರಿದು ಬರುವ ವಿಶ್ವಾಸವಿದೆ ಎಂದು ಶಾಸಕ ಜಯರಾಂ ಹೇಳಿದರು.

Advertisement

ತಾಲೂಕಿನ ದಂಡಿನಶಿವರದಲ್ಲಿ ನಡೆದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉಧಾ^ಟಿಸಿ ಮಾತನಾಡಿದ ಅವರು, ಈ ಬಾರಿ ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಮುಂದೆ ನಿಂತು ನಾನೇ ತುಂಬಿಸುತ್ತೇನೆ.ಈ ಕಾರ್ಯದಲ್ಲಿ ನಾನು ಕಾನೂನು ಉಲ್ಲಂ ಸಿ ಜೈಲಿಗೆ ಹೋದರೂ ಪರವಾಗಿಲ್ಲ ಎಂದರು. 

ರೈತರನ್ನು ಕಚೇರಿಗೆ ಅಲೆಸದಿರಿ: ರೈತರನ್ನು ತಮ್ಮ ಕಚೇರಿಗಳಿಗೆ ವಿನಾಕಾರಣ ಅಲೆದಾಡಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ರೈತರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ತಾಲೂಕಿಗೆ ಮುರ್‍ನಾಲ್ಕು ಬಾರಿ ಅಲೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಅಧಿಕಾರಿಗಳು ಕೂಡಲೇ ತಮ್ಮ ಕಾರ್ಯವೈಖರಿ ಬದಲಿಸಿಕೊಳ್ಳ ದಿದ್ದಲ್ಲಿ ಮುಂದಾಗುವ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. 

ತೋಟಗಾರಿಕೆ ಬೆಳೆ ಅಗತ್ಯ: ದೇವರ ಕೃಪೆಯಿಂದಾಗಿ ಮಳೆಯಾಗುತ್ತಿರುವುದು ಸಂತಸದ ವಿಚಾರ, ರೈತರು ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆಯ ಜೊತೆ-ಜೊತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ರೂಡಿಸಿಕೊಳ್ಳಬೇಕು,

ಹೈನುಗಾರಿಕೆ, ಕೋಳಿ ಸಾಕಣೆಯಂತಹ ಉಪಕಸುಬುಗಳು ಇದ್ದಾಗ ಮಾತ್ರ ಕೃಷಿಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸಬಹುದು ಎಂದರು. ನಿಮ್ಮ ಸಹಕಾರದಿಂದ ನಾನು ಶಾಸಕನಾಗಿದ್ದೇನೆ, ಪಕ್ಷ ರಾಜಕಾರಣ ಚುನಾವಣೆಗೆ ಸೀಮಿತ ನಾನು ತಾಲೂಕಿನ ಸಮಸ್ಥ ಜನತೆಯ ಸೇವಕನಾಗಿ ನಿಮ್ಮ ಋಣ ತೀರಿಸುತ್ತೇನೆ ಎಂದರು. 

Advertisement

ಕೃಷಿ ಸೌಲಭ್ಯ ಸದ್ಬಳಕೆಯಾಗಲಿ: ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ, ರೈತರು ಕೃಷಿ ತೋಟಗಾರಿಕೆ, ರೇಷ್ಮೆ ಅರಣ್ಯ ಇಲಾಖೆಗಳಲ್ಲಿ ದೊರೆಯುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ಸಂಧರ್ಭದಲ್ಲಿ ಶಾಸಕ ಜಯರಾಮ್‌ ವಿವಿಧ ಕಂಪನಿಗಳ ಕೃಷಿ ಯಂತ್ರೋಪಕರಣಗಳ ಮಳಿಗೆಗಳನ್ನು ಉದ್ಘಾಟಿಸಿ, ರೈತರಿಗೆ ಸಸಿ ವಿತರಣೆ ಮಾಡಿದರು.

ಸಮಾರಂಭದಲ್ಲಿ ವಿವಿಧ ಎ.ಒ.ನಟರಾಜು, ರೇಷ್ಮೆ ಇಲಾಖಾಧಿಕಾರಿ ಪ್ರಹ್ಲಾದ್‌, ಮಣ್ಣುವಿಜ್ಞಾನಿ ಅನಿತಾ, ತಾಲೂಕು ಪಂಚಾುತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಸಿ.ಕುಮಾರ್‌, ಸದಸ್ಯ ಮಹಾಲಿಂಗಪ್ಪ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷರಾದ ಕೊಂಡಜ್ಜಿ ವಿಶ್ವನಾಥ್‌, ಶಂಕರೇಗೌಡ ಮುಖಂಡರುಗಳಾದ ದುಂಡಾರೇಣುಕಪ್ಪ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next