ಸೇಡಂ: ತಾಲೂಕು ರೆಡ್ಡಿ ಸಮಾಜದ ವತಿಯಿಂದ ಮೇ 11 ರಂದು ಬೃಹತ್ ಮಟ್ಟದಲ್ಲಿ ಶಿವಶರಣರೆಡ್ಡಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಆಯೋಜಿಸಿರುವುದಾಗಿ ರೆಡ್ಡಿ ಸಮಾಜದ ಅಧ್ಯಕ್ಷ ವೀರಾರೆಡ್ಡಿ ಹೂವಿನಬಾವಿ ತಿಳಿಸಿದ್ದಾರೆ. ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೆಡ್ಡಿ ಸಮಾಜವನ್ನು ಬಲಪಡಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅದರಂತೆ ಸಮಾಜದ ದೈವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ತಾಲೂಕು ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ವಾಸವಿ ಕಲ್ಯಾಣ ಮಂಟಪದಲ್ಲಿ ಮೇ 11ರಂದು ನಡೆಯುವ ಜಯಂತ್ಯುತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್. ಕೆ. ಪಾಟೀಲ ಉದ್ಘಾಟಿಸುವರು ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ, ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ, ತೆಲಂಗಾಣ ರಾಜ್ಯದ ಕೊಡಂಗಲ ಶಾಸಕ ರೇವಂತರೆಡ್ಡಿ, ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಗಾಲಿ ಜನಾರ್ಧನರೆಡ್ಡಿ, ಅಮರೇಗೌಡ ಬಯ್ನಾಪುರ ಹಾಜರಿರುವರು.
ಅತಿಥಿಗಳಾಗಿ ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಶಾಸಕರಾದ ಬಸವಂತರೆಡ್ಡಿ ಪಾಟೀಲ ಮೋತಕಪಲ್ಲಿ, ಎ. ಪಾಪರೆಡ್ಡಿ, ಡಾ| ನಾಗರೆಡ್ಡಿ ಪಾಟೀಲ, ಲಿಂಗಾರೆಡ್ಡಿ ಬಾಸರೆಡಿ ನಾಲವಾರ, ಶಾಂತರೆಡ್ಡಿ ವನಕೇರಿ, ಚನ್ನಾರೆಡ್ಡಿ ಪಾಟೀಲ, ನಾಗರೆಡ್ಡಿ ಪಾಟೀಲ ಕರದಾಳ ಭಾಗವಹಿಸುವರು.
ಹಿರಿಯ ಸಾಹಿತಿ ಪ್ರೊ| ಸೂಗಯ್ಯ ಹಿರೇಮಠ ಉಪನ್ಯಾಸ ನೀಡುವರು. ಇದೇ ವೇಳೆ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಹೈಕ ಶಿಕ್ಷಣ ಸಂಸ್ಥೆ ನಾಮ ನಿರ್ದೇಶಿತ ಸದಸ್ಯ ಡಾ| ಶರಣಬಸಪ್ಪ ಕಾಮರೆಡ್ಡಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ ನಿರ್ದೇಶಕ ಈರಣ್ಣಗೌಡ ಪರಸರೆಡ್ಡಿ ನಾಲವಾರಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.
ರೆಡ್ಡಿ ಸಮಾಜದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸದಸ್ಯರನ್ನು ಸನ್ಮಾನಿಸಲಾಗುವುದು ಎಂದು ವಿವರಿಸಿದರು. ಡಾ| ಶ್ರೀನಿವಾಸರೆಡ್ಡಿ, ಶಿವಲಿಂಗರೆಡ್ಡಿ, ಶಂಭುರೆಡ್ಡಿ ನರಸಗೋಳ, ರಾಜೇಂದ್ರ ಮುನ್ನೂರ, ಹೇಮರೆಡ್ಡಿ ಪಾಟೀಲ, ನರಸಿಂಹರೆಡ್ಡಿ, ಬಿಚ್ಚರೆಡ್ಡಿ ಪೈಕೋಡಿ, ಮಹಿಪಾಲರೆಡ್ಡಿ ಮುನ್ನೂರು ಹಾಜರಿದ್ದರು.