Advertisement

Hemant Soren; ಮತ್ತೆ ಅಧಿಕಾರಕ್ಕೇರಿದರೆ ಸಬ್ಸಿಡಿ ಪಡಿತರ 7 ಕೆ.ಜಿ.ಗೆ ಏರಿಕೆ

01:24 AM Nov 04, 2024 | Team Udayavani |

ರಾಂಚಿ: ಜಾರ್ಖಂಡ್‌ನ‌ಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬಂದರೆ ಸರಕಾರದ ಪಡಿತರ ಯೋಜನೆಯಲ್ಲಿ ತಿಂಗಳಿಗೆ 5 ಕೆ.ಜಿ ಬದಲು 7 ಕೆ.ಜಿ ಪಡಿತರ ನೀಡುವುದಾಗಿ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಭಾನುವಾರ ಹೇಳಿದ್ದಾರೆ. ಪಿಂಚಣಿ ಮೊತ್ತವನ್ನೂ ಏರಿಕೆ ಮಾಡಲಾಗುವುದು ಎಂದಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ 11 ಲಕ್ಷ ಪಡಿತರ ಚೀಟಿ, 3 ಲಕ್ಷ ಪಿಂಚಣಿ ರದ್ದುಗೊಳಿ ಸಲಾಗಿದೆ. ಹಸಿವಿನಿಂದ ಬುಡಕಟ್ಟು ಜನಾಂಗದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ನಮ್ಮ ಸರಕಾರ ಬಂದ ಮೇಲೆ ಎಲ್ಲರಿಗೂ ಪಡಿತರ ದೊರೆ ಯುತ್ತಿದೆ. ಮಯ್ನಾ ಸಮ್ಮಾನ್‌ ಯೋಜನೆಯ ಫ‌ಲಾ ನುಭವಿಗಳಿಗೆ ತಿಂಗಳಿಗೆ 2500 ರೂ. ನೀಡಲಾಗು ವುದು. ಅಂಗನವಾಡಿಗಳಲ್ಲಿ ಮೊಟ್ಟೆ, ಹಣ್ಣು ನೀಡಲಾ ಗುವುದು ಎಂದು ಸೊರೇನ್‌ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next