Advertisement
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ರೋಟರಿ ಸಂಸ್ಥೆ ಸದಾಶಿವ ನಗರ ಬೆಂಗಳೂರು ಹಾಗೂ ರೋಟರಿ ಸಂಸ್ಥೆ ತಿಪಟೂರು, ಮಾಲ್ಗುಡಿ ಹಾಗೂ ಎಸ್‌ಬಿಐ ಮ್ಯೂಚ್ಯುಯಲ್ ಫಂಡ್ ಸಹಯೋಗದೊಂದಿಗೆ ಆಯೋಜಿಸಿದ್ದ ದಿವ್ಯಾಂಗರಿಗೆ ಉಚಿತ ವ್ಹೀಲ್‌ಚೇರ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿವ್ಯಾಂಗರಿಗೆ ಅನುಕಂಪಕ್ಕಿಂತ ಸಹಾಯ ಮತ್ತು ಪ್ರೋತ್ಸಾಹದ ಅವಶ್ಯಕತೆ ಇದೆ.
Related Articles
Advertisement
ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ ಅಧ್ಯಕ್ಷ ಮೋಂಟು ಬೈ ಮಾತನಾಡಿ, ದಿವ್ಯಾಂಗತೆ ಶಾಪ ಅಲ್ಲ. ಕೆಲವರು ಹುಟ್ಟುತ್ತಲೇ ದಿವ್ಯಾಂಗರಾದರೆ ಇನ್ನು ಕೆಲವರು ಕಾರಣಾಂತರಗಳಿಂದ ತಮ್ಮ ಅಂಗಾಂಗಗಳನ್ನು ಕಳೆದುಕೊಳ್ಳುತ್ತಾರೆ. ಇಂತಹವರ ಸೇವೆಗಾಗಿಯೇ ನಮ್ಮ ಸಮಿತಿ ಸದಾ ಕೆಲಸ ಮಾಡಲಿದ್ದು, ನಮ್ಮ ಸಮಿತಿಯಿಂದ 20 ಲಕ್ಷಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಕಾಲು, ಕೈ ಹಾಗೂ ವ್ಹೀಲ್‌ಚೇರ್ ವಿತರಣೆ ಮಾಡಲಾಗಿದೆ ಎಂದರು.
ವ್ಹೀಲ್‌ಚೇರ್ ವಿತರಣೆ: 160 ದಿವ್ಯಾಂಗರಿಗೆ ವ್ಹೀಲ್ ಚೇರ್ ವಿತರಣೆ ಮಾಡಲಾಯಿತು. ಕಲ್ಪತರು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿ ಎಂ.ಆರ್.ಸಂಗಮೇಶ್, ಬಾಗೇಪಲ್ಲಿ ನಟರಾಜು, ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿಯ ಕಮಲ್ ಮೆಹ್ತಾ, ಮಹದೇವ್ ಜೈನ್, ಲಲಿತ್ ಜೈನ್, ರೋಟರಿ ಸುರೇಶ್, ಮಹದೇವ್ ಪ್ರಸಾದ್, ತಿಪಟೂರು ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್‌ಕುಮಾರ್, ಮಾಜಿ ಅಧ್ಯಕ್ಷರಾದ ವಿಜಯಕುಮಾರಿ, ಅರುಣ್‌ಕುಮಾರ್, ತೋಂಟದಾರ್ಯ, ಅಪ್ಪೇಗೌಡಸ್ವಾಮಿ ಹಾಗೂ ಮತ್ತಿತರರು ಇದ್ದರು.