ಹೊಸದಿಲ್ಲಿ: ಕೊರೊನಾದಿಂದಾಗಿ ಹೆತ್ತವ ರನ್ನು ಕಳೆದುಕೊಂಡ ಹತ್ತು ಸಾವಿರ ಮಕ್ಕಳಿಗೆ ನೆರವಾಗಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರಕಾರಗಳಿಗೆ ಬುಧವಾರ ನಿರ್ದೇಶನ ನೀಡಿದೆ.
ಜತೆಗೆ ಅವರಿಗೆ ಪರಿಹಾರವನ್ನೂ ನೀಡಬೇಕು ಎಂದು ನ್ಯಾ| ಎಂ.ಆರ್.ಶಾ ಮತ್ತು ನ್ಯಾ| ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದೆ.
ಆಂಧ್ರಪ್ರದೇಶ ಮತ್ತು ಬಿಹಾರಗಳಲ್ಲಿ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ 50 ಸಾವಿರ ರೂ. ಪರಿಹಾರ ವಿತರಿಸಲಾಗಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸ ಲಾಗಿದ್ದ ಅರ್ಜಿಯ ವಿಚಾರಣೆ ವೇಳೆ, ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಜತೆಗೆ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಆನ್‌ಲೈನ್ ಮೂಲಕ ವಿಚಾರಣೆಯಲ್ಲಿ ಹಾಜರಾಗುವಂತೆ ಸೂಚಿಸಿ, “ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳದೇ ಇದ್ದುದಕ್ಕೆ ಏಕೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳ ಬಾರದು’ ಎಂದು ಪ್ರಶ್ನಿಸಿತು. ಜತೆಗೆ ಎರಡೂ ರಾಜ್ಯ ಸರಕಾರಗಳ ಅಧಿಕಾರಿಗಳು ಮಕ್ಕಳಿಗೆ ಪರಿಹಾರ ವಿತರಿಸಿ, ಅದರ ಬಗ್ಗೆ ಪೂರ್ಣ ವಿವರ ಸಲ್ಲಿಸಬೇಕು. ಗುರುವಾರ ಈ ಬಗ್ಗೆ ಪೂರ್ಣ ಆದೇಶ ನೀಡುವುದಾಗಿ ಹೇಳಿತು.
ಏರಿಕೆ-ಇಳಿಕೆ: ಮುಂಬಯಿಯಲ್ಲಿ 6,032, ಕೋಲ್ಕತಾದಲ್ಲಿ 2,154 ಹೊಸ ಕೇಸುಗಳು ದೃಢಪಟ್ಟು ಇಳಿಕೆಯ ಹಂತ ತೋರಿಸಿವೆ. ಆದರೆ ಗುಜರಾತ್, ಕೇರಳಗ ಳಲ್ಲಿ ಸೋಂಕು ಸಂಖ್ಯೆ ಏರಿಕೆಯ ಹಾದಿಯಲ್ಲಿದೆ.
159.54 ಕೋಟಿ ಡೋಸ್: ಬುಧವಾರ ರಾತ್ರಿ 7 ಗಂಟೆ ವೇಳೆಗೆ 62 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ 159.54 ಕೋಟಿ ಡೋಸ್ ಲಸಿಕೆ ನೀಡಿದಂತಾಗಿದೆ. ಈ ಪೈಕಿ 15-18ನೇ ವಯಸ್ಸಿನ ಮಕ್ಕಳಿಗೆ 3.82 ಕೋಟಿ ಡೋಸ್ ನೀಡಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
232 ದಿನಗಳ ಗರಿಷ್ಠ: ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ ದೇಶದಲ್ಲಿ 2,82,970 ಹೊಸ ಕೇಸುಗಳು ಮತ್ತು 441 ಮಂದಿ ಸಾವಿನ ಪ್ರಕರಣಗಳು ದೃಢಪಟ್ಟಿವೆ. ಇದು 232 ದಿನಗಳ ಗರಿಷ್ಠದ್ದಾಗಿದೆ. ಕಳೆದ ವರ್ಷದ ಮೇ 31ರ ಬಳಿಕ ಸಕ್ರಿಯ ಸೋಂಕು ಗರಿಷ್ಠ ಅಂದರೆ 18,95,520ಕ್ಕೆ ಏರಿಕೆಯಾಗಿದೆ.