Advertisement

ಉಪಕಾರಿ ಐಸ್‌ಕ್ರೀಮ್‌

05:54 PM Apr 02, 2019 | mahesh |

“ಅಮ್ಮಾ, ಐಸ್‌ಕ್ರೀಂ ಬೇಕು’ ಅಂತ ಮಕ್ಕಳು ಅಳು ಮುಖ ಮಾಡಿದರೆ, “ಏಯ್‌, ಹಲ್ಲು ಹಾಳಾಗುತ್ತೆ’ ಅಂತ ಗದರುವ ಅಮ್ಮಂದಿರೇ ಜಾಸ್ತಿ. ಆದರೆ, ಐಸ್‌ಕ್ರೀಂ ತಿನ್ನೋದ್ರಿಂದ ಬಹಳಷ್ಟು ಉಪಯೋಗವೂ ಆಗುತ್ತೆ. ಇದನ್ನೋದಿದ ಮೇಲೆ ಮಕ್ಕಳ ಜೊತೆಗೆ ನೀವೂ ಐಸ್‌ಕ್ರೀಂ ತಿನ್ನೋಕೆ ಮನಸ್ಸು ಮಾಡ್ತೀರಿ.

Advertisement

1. ತೂಕ ಹೆಚ್ಚೋದಿಲ್ಲ
ಐಸ್‌ಕ್ರೀಂ ತಿಂದರೆ ದಪ್ಪ ಆಗ್ತಾರೆ ಅನ್ನೋದು ಎಲ್ಲರಲ್ಲಿರುವ ಅಭಿಪ್ರಾಯ. ಆದರೆ, ದಿನವೂ “ಲೋ ಫ್ಯಾಟ್‌ ಐಸ್‌ಕ್ರೀಂ’ ಸವಿದರೆ ತೂಕ ಕಳೆದುಕೊಳ್ಳಬಹುದಂತೆ.

2. ಶಕ್ತಿ ಬರುತ್ತೆ
ಐಸ್‌ಕ್ರೀಂನಲ್ಲಿ ಸಕ್ಕರೆಯ ಅಂಶ ಅಧಿಕವಾಗಿರುತ್ತದೆ. ಸಕ್ಕರೆ ಅಂದ್ರೆ, ಗ್ಲೋಕೋಸ್‌. ಹಾಗಾಗಿ, ಐಸ್‌ಕ್ರೀಂ ಸೇವನೆಯಿಂದ ತ್ವರಿತವಾಗಿ ದೇಹಕ್ಕೆ ಶಕ್ತಿ ಸಿಗುತ್ತದೆ.

3. ಮೂಳೆ ಗಟ್ಟಿಯಾಗುತ್ತದೆ
ಕ್ಯಾಲ್ಸಿಯಂ ಸೇವನೆಯಿಂದ ಮೂಳೆ ಮತ್ತು ಹಲ್ಲು ಸದೃಢವಾಗುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಐಸ್‌ಕ್ರೀಂನಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಇರೋದ್ರಿಂದ ಅದು ಮೂಳೆಯ ಮತ್ತು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು.

4. ಖುಷಿಯಾಗಿರೋಕೆ ಐಸ್‌ಕ್ರೀಂ ತಿನ್ನಿ
ಐಸ್‌ಕ್ರೀಂ ತಿನ್ನೋದ್ರಿಂದ ನಾಲಿಗೆಗಷ್ಟೇ ಅಲ್ಲ, ಮನಸ್ಸಿಗೂ ಖುಷಿಯಾಗುತ್ತೆ ಅನ್ನೋದು ಸಂಶೋಧನೆಗಳಿಂದ ತಿಳಿದು ಬಂದಿದೆ. ಐಸ್‌ಕ್ರೀಮ್‌ ಸೇವಿಸಿದಾಗ ದೇಹದಲ್ಲಿ “ಸೆರೊಟನಿನ್‌’ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ಆ ಹಾರ್ಮೋನಿನ ಕೆಲಸವೇ ನಮ್ಮನ್ನು ಸಂತೋಷವಾಗಿಡೋದು. ಬ್ರೇಕ್‌ಅಪ್‌ ನಂತರ ಖನ್ನತೆಗೊಳಗಾದ ಹುಡುಗೀರು ಐಸ್‌ಕ್ರೀಂ ತಿನ್ನುತ್ತಾ ಕೂರೋದನ್ನು ಸಿನಿಮಾಗಳಲ್ಲಿ ಯಾಕೆ ತೋರಿಸ್ತಾರೆ ಅಂತ ಗೊತ್ತಾಯ್ತಲ್ಲ?

Advertisement

5. ರೋಗ ನಿರೋಧಕ ಶಕ್ತಿಗಾಗಿ
ಐಸ್‌ಕ್ರೀಮ್‌ನಲ್ಲಿ ಅಡಗಿರುವುದು ಹಾಲಿನ ಉತ್ಪನ್ನಗಳು. ಅವು ಜಠರದ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಬರದಂತೆ ತಡೆಯುವುದರ ಮೂಲಕ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

6. ಮೆದುಳನ್ನು ಚುರುಕಾಗಿಸುತ್ತೆ…
ಜಪಾನ್‌ನಲ್ಲಿ ನಡೆದ ಸಂಶೋಧನೆಯ ಪ್ರಕಾರ, ಬೆಳಗ್ಗೆ ಎದ್ದ ಕೂಡಲೇ ಐಸ್‌ಕ್ರೀಂ ತಿನ್ನುವುದರಿಂದ ಮೆದುಳು ಚುರುಕಾಗಿ, ಇಡೀ ದಿನ ಲವಲವಿಕೆಯಿಂದ ಇರಲು ಸಾಧ್ಯವಂತೆ. ಇದಕ್ಕೆ ನಿರ್ದಿಷ್ಟ ಕಾರಣಗಳಿನ್ನೂ ಪತ್ತೆಯಾಗಿಲ್ಲ. ಆದರೆ, ಐಸ್‌ಕ್ರೀಂ ಸೇವನೆಯಿಂದ ಡೋಪಮೈನ್‌ ಹಾರ್ಮೋನಿನ ಪ್ರಮಾಣ ಹೆಚ್ಚುವುದೇ ಮೆದುಳು ಚುರುಕಾಗಲು ಕಾರಣ ಅಂತಾರೆ ವೈದ್ಯರು.

Advertisement

Udayavani is now on Telegram. Click here to join our channel and stay updated with the latest news.

Next