Advertisement
ಉಪ್ಪುಂದದ ವರಲಕ್ಷ್ಮೀ ಚಾರಿಟೆ ಬಲ್ ಟ್ರಸ್ಟ್ ಸಂಸ್ಥಾಪಕ ಡಾ| ಗೋವಿಂದ ಬಾಬು ಪೂಜಾರಿ ಅವರು ಶ್ರಾವ್ಯಾ ಮನೆಗೆ ಭೇಟಿ ನೀಡಿ ವಿಚಾರಿಸಿದ ಬಳಿಕ, ಚಿಕಿತ್ಸೆ ವೆಚ್ಚ ಭರಿಸಲು ನಿರ್ಧರಿಸಿದ್ದಾರೆ. ಒಂದು ವರ್ಷದ ಚಿಕಿತ್ಸೆ ವೆಚ್ಚದೊಂದಿಗೆ ಮಣಿಪಾಲ ಆಸ್ಪತ್ರೆಯ ವೈದ್ಯರು ಶಿಫಾರಸು ಮಾಡಿದ 75 ಸಾವಿರ ರೂ. ಮೌಲ್ಯದ ಚುಚ್ಚುಮದ್ದು ನೀಡಲು ಸಹಕರಿಸಿದ್ದಾರೆ.
ಎಲ್ಲ ಮಕ್ಕಳಂತೆ ಚುರುಕಾಗಿದ್ದ ಶ್ರಾವ್ಯಾ ಕರುಳು ಸಂಬಂಧಿ ಅನಾ ರೋಗ್ಯ (ಐಬಿಡಿ ಕ್ರೋಮ್ಸ್)ಕ್ಕೆ ತುತ್ತಾಗಿದ್ದು, ದೇಹದ ತೂಕ ಕೇವಲ 12 ಕೆ.ಜಿ.ಗೆ ಇಳಿದಿತ್ತು. ಶಾಲೆ ಮೆಟ್ಟಿಲು ಹತ್ತಲಾರದೆ, ವರ್ಷವಿಡೀ ಕೇವಲ ನೋಟ್ಸ್ ಜೆರಾಕ್ಸ್ ಪ್ರತಿ ಮಲಗಿಕೊಂಡೇ ಓದಿ, ಎಸೆಸೆಲ್ಸಿ ಪರೀಕ್ಷೆ ಬರೆದ ಶ್ರಾವ್ಯಾ 580 ಅಂಕ ಪಡೆದಿರುವುದು ವಿಶೇಷ. ಉದಯವಾಣಿ ವರದಿ
ಶ್ರಾವ್ಯಾಳ ಸಾಧನೆ ಬಗ್ಗೆ ಉದಯವಾಣಿಯು ಜೂ. 2ರಂದು “ಕಲಿಕಾ ಯಶೋಗಾಥೆ’ ಸರಣಿಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು. ಪಿಯು ವಿಜ್ಞಾನ ವ್ಯಾಸಂಗಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹಾಗೂ ಆರ್.ಎನ್. ಶೆಟ್ಟಿ ಪಿಯು ಕಾಲೇಜು ಪ್ರಾಂಶುಪಾಲ ನವೀನ್ ಶೆಟ್ಟಿ ನೆರವಾಗಿದ್ದು, ಉಚಿತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ರಾಜು ಪೂಜಾರಿ ಜಡ್ಕಲ್ ಅವರು ಅಂಗವಿಕಲರ ಕೋಟಾದಲ್ಲಿ ಮಾಸಾಶನ ಸಿಗುವ ಕುರಿತಂತೆ ಪ್ರಯತ್ನಿಸಿದ್ದಾರೆ. ಬಿಲ್ಲವ ಸಂಘಟನೆಗಳು ನೆರವಾಗಿವೆ.