Advertisement

ಸಸ್ಯ ಸಂಕುಲ ಉಳಿಸಿ ಬೆಳೆಸಲು ಕೈಜೋಡಿಸಿ : ನೂರುನ್ನಿಸಾ

07:53 PM Sep 22, 2019 | Team Udayavani |

ಮಡಿಕೇರಿ: ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು. ಮುಂದಿನ ದಿನಗಳಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಆದ್ದರಿಂದ ಸಸ್ಯ ಸಂಕುಲ ಹೆಚ್ಚಿಸಿ ಮನುಷ್ಯ, ಪ್ರಾಣಿಗಳಿಗೆ ಆಗಬಹುದಾದ ದುಷ್ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಸಸ್ಯ ಸಂಕುಲವನ್ನು ಉಳಿಸಿ ಬೆಳೆಸಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್‌ ನ್ಯಾಯಾಧೀಶೆ ನೂರುನ್ನಿಸಾ ಅವರು ಕರೆ ನೀಡಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಂತ ಜೋಸೆಫ‌ರ ವಿದ್ಯಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಓಜೋನ್‌ ದಿನಾಚರಣೆ ಕಾರ್ಯಕ್ರಮವು ನಗರದ ಸಂತ ಜೋಸೆಫ‌ರ ಶಾಲೆಯಲ್ಲಿ ಶುಕ್ರವಾರ ನಡೆಯಿತು.

ಸುತ್ತ ಮುತ್ತಲಿನ ಪರಿಸರದಲ್ಲಿ ಗೀಡ-ಮರಗಳನ್ನು ಬೆಳೆಸುವುದರಿಂದ ಪರಿಸರದಲ್ಲಿ ವಾಯುಮಾಲಿನ್ಯ ತಡಗಟ್ಟುವ ಮೂಲಕ ಓಜೋನ್‌ ಪದರಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ನೂರುನ್ನಿಸಾ ಅವರು ತಿಳಿಸಿದರು.

ಕಾರ್ಖಾನೆ, ವಾಹನ ಮುಂತಾದ ವುಗಳಿಂದ ಹೊರಹೊಮ್ಮುವ ರಾಸಾ ಯನಿಕ ಮತ್ತು ವಿಷಕಾರಕ ವಸ್ತುಗಳು ಹೆಚ್ಚುತ್ತಿರುವುದರಿಂದ ಜಾಗತಿಕ ತಾಪಮಾನ ಓಜೋನ್‌ ಪದರದ ಮೇಲೆ ದುಷ್ಟಪರಿಣಾಮವನ್ನು ಬೀರುತ್ತಿದೆ ಇದರಿಂದ ಓಜೋನ್‌ ಪದರವು ಕ್ಷೀಣಿಸುತ್ತಿದೆ ಎಂದು ಅವರು ಹೇಳಿದರು. ಬೇರೆಯವರಿಗೆ ಓಜೋ® ಪದರದ ಸಂರಕ್ಷಣೆಯ ಅರಿವು ಮೂಡಿಸಬೇಕು ಎಂದು ಹೇಳಿದರು..ಸಂತ ಜೋಸೆಫ‌ರ ವಿದ್ಯಾಸಂಸ್ಥೆಯ ಸಂಚಾಲಕಿ ಸಿಸ್ಟರ್‌ ಆಂಥೋನಿಯಮ್ಮ, ಉಪ ಪರಿಸರಾಧಿಕಾರಿ ಡಾ|ಎಂ.ಕೆ.ಸುಧಾ. ಮುಖ್ಯೋಪಾಧ್ಯಾಯ ಸಿಸ್ಟರ್‌ ರೇಲಿಮಾ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಉಪಾಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯೂ ಮತ್ತಿತರರು ಪಾಲ್ಗೊಂಡಿದ್ದರು. ಜಯಪ್ಪ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಜೀವ ಸಂಕುಲಕ್ಕೆ ಹಾನಿ
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್‌ ಗಣೇಶನ್‌ ಅವರು ಮಾತನಾಡಿ ಓಜೋನ್‌ ಪದರದ ಹಾನಿಯಿಂದ ನೇರಳಾತೀತ ನೀಲ ಕಿರಣಗಳು ಭೂಮಿಯನ್ನು ಪ್ರವೇಶಿಸಿ ಜೀವ ಸಂಕುಲಕ್ಕೆ ಹಾನಿ ಉಂಟು ಮಾಡುತ್ತದೆ. ಹಾಗೇ ಇದನ್ನೂ ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿಯಾಗುತ್ತದೆ. ಇಂಗಾಲ ಪ್ರಮಾಣದ ಬಳಕೆಗೆ ಕಡಿವಾಣ ಹಾಕಿ ಓಜೋನ್‌ ಪದರದ ರಕ್ಷಣೆ ಮಾಡುವುದು ಪ್ರತಿಯೋಬ್ಬರ ಜವಬ್ದಾರಿಯಾಗಿದೆ ಎಂದು ಹೇಳಿದರು.

Advertisement

ಓಜೋನ್‌ ಪದರ ಹಾನಿಯಿಂದ ಮಾನವರ ದೇಹಕ್ಕೆ, ಜೀವ ಸಂಕುಲಕ್ಕೆ ಹಾನಿಯಾಗುತ್ತದೆ ಓಜೋನ್‌ ಪದರ ಸಂರಕ್ಷಣೆಗೆ ಎಲ್ಲರೂ ಬದ್ದರಾಗಿರಬೇಕು ಎಂದು ಜಿ.ಆರ್‌ ಗಣೇಶನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next