ಇನ್ನೊಂದೆಡೆ ಜೈಶ್ ಎ ಮೊಹಮ್ಮದ್ ಉಗ್ರ ಮುದಸ್ಸಿರ್ ಅಹಮದ್ ಖಾನ್ ಪಾತ್ರವೂ ಈ ದಾಳಿಯಲ್ಲಿದೆ ಎನ್ನಲಾಗಿದ್ದು, ಇದಕ್ಕೆ ಸೂಕ್ತ ಸುಳಿವಿಗಾಗಿ ಹುಡುಕಾಟ ನಡೆದಿದೆ.
Advertisement
ಎನ್‌ಐಎ ತನಿಖೆ ಆರಂಭ: ಪುಲ್ವಾಮಾ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೆತ್ತಿಕೊಂಡಿದೆ. ಜತೆಗೆ ಪ್ರಕರಣದ ಬಗ್ಗೆ ಹೊಸತಾಗಿ ಕೇಸು ದಾಖಲಿಸಿಕೊಂಡಿದೆ. ಎನ್‌ಐಎ ಮಹಾ ನಿರ್ದೇಶಕ ವೈ.ಸಿ.ಮೋದಿ, ಇತರ ಅಧಿಕಾರಿಗಳು ಅವಂತಿಪೊರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎನ್‌ಐಎ ಈಗಾಗಲೇ ಸ್ಫೋಟಕಗಳ ಮಾದರಿ ಮತ್ತು ಇತರ ಅಂಶಗಳನ್ನು ಸಂಗ್ರಹಿಸಿದೆ. ಘಟನೆಗೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ. ಗುಪ್ತಚರ ಸಂಸ್ಥೆಯ ಕೆಲ ಅಧಿಕಾರಿಗಳನ್ನೂ ಅದು ಭೇಟಿ ಮಾಡಿದೆ. ಇದುವರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಅದರ ಹೊಣೆ ವಹಿಸಿಕೊಂಡಿದ್ದರು.
ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಯೋಧ ಸಂದೀಪ್ ಕುಮಾರ್ ಬುಧವಾರ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ. ಇವರು ಹರ್ಯಾಣದ ಫರೀದಾಬಾದ್‌ನವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.