Advertisement

ಗ್ರಾಮೀಣಾಭಿವೃದ್ದಿ ಯೋಜನೆಯಿಂದ ಸಹಾಯ

05:44 PM Feb 23, 2022 | Shwetha M |

ಸಿಂದಗಿ: ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳಿಂದ ಕೈಗೊಂಡಿರುವ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗಿವೆ ಎಂದು ಧರ್ಮಸ್ಥಳ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಹೇಳಿದರು.

Advertisement

ತಾಲೂಕಿನ ಯರಗಲ್‌ ಬಿ.ಕೆ. ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಮನೆ ಹಾನಿಗೊಳಗಾದ ಫಲಾನುಭವಿಗಳಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಮಂಜೂರಾದ ಧನಸಹಾಯ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯು ನೊಂದವರಿಗೆ ಆಶರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಬಡ ಕುಟುಂಬಗಳನ್ನು ಗುರುತಿಸಿ ಅಂಥ ಫಲಾನುಭವಿಗಳಿಗೆ ಸಂಸ್ಥೆ ವತಿಯಿಂದ ಧನಸಹಾಯ ನೀಡಲಾಗುತ್ತಿದೆ. ಪ್ರತಿ ತಿಂಗಳು ಮಾಸಾಶನ ಕೊಡುವ ಕಾರ್ಯಕ್ರಮದಲ್ಲಿ 78 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಗ್ರಾಮದ ಖುರಾನಸಾಬ ಜಟ್ನಾಳ ಸೇರಿದಂತೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಇದ್ದರು.

ಸಿಂದಗಿ ಪಟ್ಟಣದ ಕಾಳಿಕಾನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಾಳಿಕಾನಗರ ಒಕ್ಕೂಟದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಆರೋಗ್ಯ ರಕ್ಷಾ ಕಾರ್ಡ್‌ ಮತ್ತು ಹಿಡುವಳಿ, ಯೋಜನೆ ಪ್ರಗತಿ ನಿಧಿ ಸಾಲ ನೇರ ಖಾತೆಗೆ ಜಮೆ ಮಾಡುವ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಒಕ್ಕೂಟದ ಅಧ್ಯಕ್ಷೆ ಮಹಾನಂದ ಬಮ್ಮಣ್ಣಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

Advertisement

ತಾಲೂಕು ಯೋಜನಾಧಿಕಾರಿ ಗಿರೀಶಕುಮಾರ ಅವರು ತರಬೇತಿ ಕಾರ್ಯಗಾರವನ್ನು ಮಾಹಿತಿ ನೀಡಿದರು. ಆರೋಗ್ಯ ರಕ್ಷಾ ಕೇವಲ 100 ರೂ. ತುಂಬಿದರೆ ಕಾರ್ಡ್‌ ಮಾಡಲಾಗುವುದು. ಕಾರ್ಡ್‌ದಾರರು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ 20ರಿಂದ 50 ಸಾವಿರ ರೂ.ವರೆಗೆ ಸೌಲಭ್ಯ ಕೊಡಲು ಅವಕಾಶ ಕಲ್ಪಿಸಲಾಗುವುದು. ಜೊತೆಗೆ ವಿಶ್ರಾಂತಿ ವೇತನವು ದೊರಕುವುದು ಎಂದು ತಿಳಿಸಿದರು.

ಆರ್ಥಿಕ ಅವ್ಯವಹಾರ ತಡೆಗಟ್ಟುವ ಉದ್ದೇಶದಿಂದ ಸಾಲಗಾರ ಸದಸ್ಯರಿಗೆ ನೇರವಾಗಿ ಅವರ ಖಾತೆಗೆ ಜಮೆ ಪ್ರಗತಿ ನಿಧಿ ಸಾಲವನ್ನು ಜಮೆ ಮಾಡುವುದು. ಹಿಡುವಳಿ ಹಾಕುವುದರ ಮೂಲಕ ಒಂದು ಕುಟುಂಬದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಮಾಹಿತಿ ನೀಡಿದರು.

ಸಿಂದಗಿ ವಲಯದ ಮೇಲ್ವಿಚಾರಕರಾದ ಸಲೀಮ, ಸೇವಾ ಪ್ರತಿನಿಧಿ ಭಾಗೀರಥಿ, ಒಕ್ಕೂಟದ ಸದಸ್ಯರಾದ ಈಶ್ವರಿ, ಅನ್ನಪೂರ್ಣ, ಗಂಗಾ, ಶ್ರೀದೇವಿ, ಸವಿತಾ, ಮಹಾನಂದ ಸೇರಿದಂತೆ ಸಂಘದ ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next