Advertisement

ಅನ್ನದಾತರ ನೋವಿಗೆ ಸಹಾಯವಾಣಿ

10:16 AM Jan 03, 2018 | Team Udayavani |

ಧಾರವಾಡ: ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಮತ್ತು ಅನ್ನದಾತರ ನೋವಿಗೆ ಸ್ಪಂದಿಸುವುದಕ್ಕಾಗಿ ಸಹಾಯವಾಣಿ
(ಮೊ: 8879069688 ) ಆರಂಭಿಸಿದ್ದು, ಇದಕ್ಕೆ ಮಿಸ್ಡ್ ಕಾಲ್‌ ನೀಡಿದರೆ ಸಾಕು ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದರು.

Advertisement

ಇಲ್ಲಿನ ಕೃಷಿ ವಿವಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಯ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಇಂದು ಸಂಕಷ್ಟದಲ್ಲಿದ್ದು ಅವರ ಸಮಸ್ಯೆಗಳಿಗೆ ನನ್ನ ಕೈಲಾದ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಅದಕ್ಕಾಗಿ ಒಂದು ತಂಡ ನಿರಂತರ ಕೆಲಸ ಮಾಡುತ್ತಿದೆ ಎಂದರು. ಸ್ವಾಮಿನಾಥನ್‌ ಆಯೋಗದ ವರದಿ ಅನುಷ್ಠಾನ, ರೈತರ ಬೆಳೆಗಳಿಗೆ ದೇಶಾದ್ಯಂತ ಬೆಂಬಲ ಬೆಲೆ ನಿಗದಿಗೊಳಿಸುವುದು ಮತ್ತು ಸಾಲಮನ್ನಾ ಸೇರಿದಂತೆ ರೈತರ ಹಿತ ಕಾಯುವಂತೆ ಆಗ್ರಹಿಸಿ ನರೇಂದ್ರ ಮೋದಿ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಮಾ.23ರೊಳಗಾಗಿ ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ ಸ್ವಾತಂತ್ರ್ಯ ಸಂಗ್ರಾಮದ ರೂಪದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನನ್ನ ಹಾಗೆ ನೀವು ಬ್ರಹ್ಮಚಾರಿ ಆಗಬೇಡಿ, ಮದುವೆಯಾಗಿ ಚಿಕ್ಕದೊಂದು ಸಂಸಾರ ಮಾಡಿಕೊಳ್ಳಿ. ಆದರೆ, ಸಮಾಜ ಮತ್ತು ದೇಶವನ್ನು ದೊಡ್ಡ ಪರಿವಾರದಂತೆ ಪರಿಗಣಿಸಿ ಜೀವಿಸಿ. ಬೇರೆಯವರಿಗೆ ಒಳ್ಳೆಯದನ್ನು ಮಾಡುವುದರಲ್ಲಿ ನೆಮ್ಮದಿ ಕಂಡುಕೊಳ್ಳಿ. ಮಾಡುವ ಕೆಲಸದಲ್ಲಿ ದೇವರಿದ್ದಾನೆ ಎಂದು ನಂಬಿಕೊಳ್ಳಿ. ನಾನು ನನ್ನ ಉಸಿರು ಇರುವವರೆಗೂ ಸಮಾಜಕ್ಕಾಗಿ ಹೋರಾಟ ನಡೆಸುತ್ತೇನೆ.
ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next