Advertisement

ಕೇರಳ ನೆರೆ-ನೆರವು: “ಸೇವಾ ಭಾರತಿ’ಯ 50,000 ಕಾರ್ಯಕರ್ತರು

11:51 AM Aug 19, 2018 | Team Udayavani |

ಮುಳ್ಳೇರಿಯ: ಕೇರಳದಲ್ಲಿ ಮಳೆಯ ರುದ್ರ ನರ್ತನಕ್ಕೆ ಸಿಲುಕಿ ಸರ್ವಸ್ವವನ್ನು ಕಳೆದುಕೊಂಡು ನಿರಾಶ್ರಿತರ ಶಿಬಿರಗಳಲ್ಲಿರುವ ಸಂತ್ರಸ್ತ ರಿಗೆ ನೆರವಾಗಲು ಸೇವಾ ಭಾರತಿಯ 50 ಸಾವಿರ ಸ್ವಯಂ ಸೇವಕರು ಶ್ರಮಿಸುತ್ತಿದ್ದಾರೆ.
ತರಬೇತಿ ಪಡೆದ ಮತ್ಸ ಕಾರ್ಮಿಕರೂ ಈ ತಂಡದಲ್ಲಿದ್ದು, 50 ದೋಣಿಗಳನ್ನು ರಕ್ಷಣಾ ಕಾರ್ಯದಲ್ಲಿ ಬಳಸಿಕೊಂಡಿದ್ದಾರೆ. ಸರಕಾರದ ವತಿಯಿಂದ ನಡೆಯುವ ಕಾರ್ಯಾಚರ ಣೆಗೂ ತಮ್ಮ ದೋಣಿಗಳನ್ನು ನೀಡಿ
ದ್ದಾರೆ.
ಸುಮಾರು 50ರಷ್ಟು ಶಿಬಿರಗಳನ್ನು ಸೇವಾ ಭಾರತಿಯೇ ನಡೆಸುತ್ತಿದೆ. ಇದರ ಹೊರತಾಗಿ ಸರಕಾರ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ನಿರಾಶ್ರಿತರ ಶಿಬಿರಗಳಲ್ಲಿ ಸೇವಾ ಭಾರತಿಯ ಕಾರ್ಯಕರ್ತರು ಅವಿರತ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇರಳದ 14 ಜಿಲ್ಲೆಗಳಲ್ಲಿಯೂ ಸೇವಾ ಭಾರತಿ ಸಹಾಯ ಕೇಂದ್ರ ತೆರೆದಿದೆ.
ಪರಿಹಾರ ಸಾಮಗ್ರಿ ಸಂಗ್ರಹಕ್ಕಾಗಿತಿರುವನಂತಪುರ, ಕಾಸರಗೋಡು, ಪಾಲಕ್ಕಾಡುಗಳಲ್ಲಿ ಕೇಂದ್ರ ತೆರೆದಿದೆ.

Advertisement

ನೆರವು ಸಂಗ್ರಹ ಕೇಂದ್ರಗಳ ದೂರವಾಣಿ ಸಂಖ್ಯೆ:
ಕಾಸರಗೋಡು: 9207668610/ 8547043672
ಪಾಲಕ್ಕಾಡು: 9961984489/ 9447375415
ತಿರುವನಂತಪುರ: 8547618883/ 9995518852.

Advertisement

Udayavani is now on Telegram. Click here to join our channel and stay updated with the latest news.

Next