Advertisement

ಹಮಾಲರ ಮನೆಗೆ ಶೀಘ್ರ ಕಾಯಕಲ್ಪ: ರಾಜುಗೌಡ

04:01 PM Aug 24, 2020 | Suhan S |

ಸುರಪುರ: ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಅಧ್ಯಕ್ಷ, ಶಾಸಕ ನರಸಿಂಹ ನಾಯಕ ರಾಜುಗೌಡ ಅವರು ಎಸ್‌. ಎಚ್‌. ಖಾನಾಪುರ ಎಪಿಎಂಸಿಗೆ ಇತ್ತೀಚೆಗೆ ಭೇಟಿ ನೀಡಿದರು.

Advertisement

ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ಬಾರಿಗೆ ಕಚೇರಿಗೆ ಭೇಟಿ ನೀಡಿದ ಶಾಸಕರಿಗೆ ಎಪಿಎಂಸಿ ಸಿಬ್ಬಂದಿ ಸನ್ಮಾನಿಸಿದರು. ಮಾರುಕಟ್ಟೆಯ ಕುಂದು ಕೊರತೆ ಹಾಗೂ ಕೆಲ ಅಭಿವೃದ್ಧಿ ಕಾರ್ಯಗಳ ಕುರಿತು ಎಪಿಎಂಸಿ ಅಧ್ಯಕ್ಷ ದೇವಣ್ಣ ಮಗಲದಿನ್ನಿ ಮತ್ತು ಕಾರ್ಯದರ್ಶಿ ಸುರೇಶ ಬಾಬು ಅವರೊಂದಿಗೆ ಚರ್ಚಿಸಿದರು. ಹಮಾಲರ ಶ್ರಮಿಕ ಭವನಕ್ಕೆ ತಡಗೋಡೆ (ಕಾಂಪೌಂಡ) ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಶೀಘ್ರ ಟೆಂಡರ್‌ ಕರೆಯುವಂತೆ ಸೂಚಿಸಿದರು.

ಶ್ರಮಿಕ ಭವನದ ನಿವೇಶನದಲ್ಲಿ ವರ್ತಕರು ಅನಧಿಕೃತವಾಗಿ ಮಳಿಗೆ ನಿರ್ಮಿಸಿಕೊಂಡಿದ್ದಾರೆ. ತೆರವುಗೊಳಿಸಿದ ಕಾಂಪೌಂಡ್‌ ನಿರ್ಮಿಸಬೇಕು ಹಾಗೂ 186 ಹಮಾಲರ ಮನೆಗಳು ಸುಮಾರು ವರ್ಷಗಳಿಂದ ನನೆಗುದಿಗೆ ಬಿದ್ದಿವೆ ಎಂದು ಹಮಾಲರು ಶಾಸಕರ ಗಮನಕ್ಕೆ ತಂದರು.

ತಕ್ಷಣವೇ ಹಮಾಲರ ಮನೆಗಳಿಗೆ ಭೇಟಿ ನೀಡಿದ ಶಾಸಕರು, ಅಂದಾಜು 20-25 ವರ್ಷಗಳ ಹಿಂದೆ 4 ಎಕರೆ ನಿವೇಶನದಲ್ಲಿ 186 ಜನ ಹಮಾಲರಿಗೆ ಮನೆ ಮಂಜೂರಾಗಿದ್ದು, ಎಲ್ಲರಿಗೂ ಹಕ್ಕು ಪತ್ರ ನೀಡಲಾಗಿದೆ. ಆದರೆ ಮನೆ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಯಾರೂ ಇತ್ತ ಗಮನಹರಿಸಿಲ್ಲ. ಈಗ 3 ನೂರು ಜನ ಹಮಾಲರಿದ್ದೇವೆ ಎಂದು ಹಮಾಲರ ಸಂಘದ ಮುಖಂಡ ದಶರಥ ದೊರೆ ಶಾಸಕರಿಗೆ ಮಾಹಿತಿ ನೀಡಿದರು. ಮಾರುಕಟ್ಟೆ ಕಾರ್ಯದರ್ಶಿ ಸುರೇಶ ಬಾಬು ಅವರಿಂದ ಮನೆಗಳ ಕುರಿತು ಮಾಹಿತಿ ಪಡೆದ ಶಾಸಕರು, ಹಮಾಲರ ಪಟ್ಟಿ ಕೊಡಿ ಕಾರ್ಮಿಕ ಸಚಿವರೊಂದಿಗೆ ಚರ್ಚಿಸುತ್ತೇನೆ ಇದೆಲ್ಲವನ್ನು ತೆಗೆದು ಹೊಸದಾಗಿ ಅಪಾರ್ಟ್‌ಮೆಂಟ್‌ ಮಾದರಿಯಲ್ಲಿ ನಿರ್ಮಿಸಿ ಎಲ್ಲರಿಗೂ ಮನೆ ಒದಗಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next