Advertisement

‘ವಿಕೋಪ ನಿರ್ವಹಣೆಗೆ ನೆರವು’

03:00 AM May 05, 2019 | Sriram |

ಮಂಗಳೂರು: ಮುಂಗಾರಿನ ಸಂದರ್ಭ ಪ್ರಕೃತಿ ವಿಕೋಪ ಸಂಭವಿಸಿದರೆ ಪರಿಸ್ಥಿತಿ ಯನ್ನು ಎದುರಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣ ವಿಭಾಗದ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ಹೇಳಿದರು.

Advertisement

ಅವರು ಶನಿವಾರ ಆಯೋಜಿಸ ಲಾಗಿದ್ದ ನೈಋತ್ಯ ಮುಂಗಾರು ಸನ್ನದ್ಧತೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಮತ್ತು ಯೋಜನೆಗಳನ್ನು ರೂಪಿಸಿದ್ದು, ಇದಕ್ಕೆಂದೇ ಜಿಲ್ಲಾಧಿಕಾರಿ ರೂಪಿಸಿರುವ ಸಾಫ್ಟ್‌ವೇರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎನ್‌ಡಿಆರ್‌ಎಫ್‌ ಪಡೆಯನ್ನು ನಿಯೋಜಿಸಲಾಗಿದ್ದು, ಎಲ್ಲ ಇಲಾಖೆ ಗಳು ಸಮನ್ವಯದಿಂದ ಕಾರ್ಯೋ ನ್ಮುಖವಾಗಬೇಕೆಂದು ಸೂಚಿಸಿದರು. ಮಳೆಗಾಲಕ್ಕೆ ಮುನ್ನವೇ ಅಗ್ನಿ ಶಾಮಕ ದಳ ಸಜ್ಜಾಗಿರುವುದನ್ನು ಪರಿಶೀಲಿಸಿದ ಅವರು, ಉತ್ತಮವಾಗಿ ಕಾರ್ಯನಿರ್ವಹಿಸಿ ಎಂದರು.

ವಿಕೋಪ ತಡೆಗೆ ಆದ್ಯತೆ
ಗೃಹ ಕಾರ್ಯದರ್ಶಿ ಉಮೇಶ್‌ ಕುಮಾರ್‌ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿದ್ದು ವಿಕೋಪ ನಿರ್ವಹಣೆಗಿಂತ ತಡೆಗೆ ಆದ್ಯತೆ ನೀಡಿ ಎಂದರು.

Advertisement

ಪ್ರಾದೇಶಿಕ ಆಯುಕ್ತ ಟಿ.ಕೆ. ಅನಿಲ್ ಕುಮಾರ್‌ ಪ್ರವಾಹ ಭೀತಿ ಪ್ರದೇಶಗಳ ಜನರಿಗೆ ಸನ್ನದ್ಧತೆಯ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಡಾ| ಶ್ರೀನಿವಾಸಯ್ಯ, ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿ ಸೆಂಥಿಲ್, ದ.ಕ. ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಎಸ್‌ಪಿ ಲಕ್ಷ್ಮೀ ಪ್ರಸಾದ್‌, ಎಡಿಸಿ ವೆಂಕಟಾಚಲಪತಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next