Advertisement

Helmet: ಹೆಲ್ಮೆಟ್‌ ಗುಣಮಟ್ಟ ಮಾರ್ಗಸೂಚಿ- ಪ್ರತ್ಯೇಕ ಮೂರು ಗುಣಮಟ್ಟ ನಿಯಂತ್ರಣದ ಆದೇಶ

09:20 PM Oct 26, 2023 | Team Udayavani |

ನವದೆಹಲಿ: ಪೊಲೀಸ್‌ ಪಡೆಗಳು, ನೀರಿನ ಬಾಟಲ್‌ಗ‌ಳ ವಿತರಕರು, ಬಾಗಿಲುಗಳನ್ನು ಜೋಡಿಸುವವರು ಧರಿಸುವ ಶಿರಸ್ತ್ರಾಣ (ಹೆಲ್ಮೆಟ್‌)ಗಳು ಹೇಗೆ ಇರಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಕಡ್ಡಾಯ ಗುಣಮಟ್ಟದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದಕ್ಕಾಗಿ ಮೂರು ಪ್ರತ್ಯೇಕ ಗುಣಮಟ್ಟ ನಿಯಂತ್ರಣದ ಆದೇಶಗಳನ್ನು ಹೊರಡಿಸಿದೆ.

Advertisement

ಈ ಮೂರು ಆದೇಶಗಳ ಅನ್ವಯ ಭಾರತೀಯ ಗುಣಮಟ್ಟ ಮಾಪಕ (ಬಿಐಎಸ್‌)ಗಳ ಮಾನ್ಯತೆ ಇಲ್ಲದೆ ಕಳಪೆ ಗುಣಮಟ್ಟದ ಶಿರಸ್ತ್ರಾಣಗಳನ್ನು ಉತ್ಪಾದನೆ, ಇತರ ದೇಶಗಳಿಂದ ಆಮದು ಮಾಡಬಾರದು. ಜತೆಗೆ ದೇಶೀಯವಾಗಿಯೇ ಹೆಲ್ಮೆಟ್‌ಗಳನ್ನು ಉತ್ಪಾದಿಸುವುದಕ್ಕೂ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರ ಯಾವ ದಿನದಿಂದ ಆದೇಶವನ್ನು ಹೊರಡಿಸಲಿದೆಯೋ ಅಲ್ಲಿಂದ ಆರು ತಿಂಗಳ ಅವಧಿಗೆ ಇದು ಜಾರಿಯಲ್ಲಿರುತ್ತದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಮಂಡಳಿ (ಡಿಪಿಐಐಟಿ) ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next