Advertisement

ಹೆಲ್ಮೆಟ್‌ ಕಡ್ಡಾಯ ಜಾಗೃತಿ ಜಾಥಾ

02:45 PM Jan 15, 2020 | Suhan S |

ಸವದತ್ತಿ: ಪೋಲಿಸ್‌ ಇಲಾಖೆ ಸಾರ್ವಜನಿಕರ ಸೇವೆಗೆಂದೇ ಇರುವ ಇಲಾಖೆಯಾಗಿದ್ದು, ಕಟ್ಟುನಿಟ್ಟಿನ ಕ್ರಮಗಳಿಂದ ಒಂದು ಜೀವ ಉಳಿದರೆ ಆ ನಿಯಮಗಳನ್ನು ಜಾರಿಗೆ ತಂದಿದ್ದು, ಸಾರ್ಥಕವೆನಿಸುತ್ತದೆಂದು ಪಿಎಸ್‌ಐ ಐ.ಕೆ. ನಾಗನಗೌಡ ಹೇಳಿದರು. ಸ್ಥಳಿಯ ಪೋಲಿಸ್‌ ಇಲಾಖೆಯವರು ಮಂಗಳವಾರ ಹಮ್ಮಿಕೊಂಡಿದ್ದ ಹೆಲ್ಮೆಟ್‌ ಕಡ್ಡಾಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿರು.

Advertisement

ಕೆಲವರು ಅವಸರಕ್ಕೋ ಅಥವಾ ಅಹಂಭಾವಕ್ಕೋ ರಸ್ತೆಗಳಲ್ಲಿ ಸುರಕ್ಷತೆಯಿಲ್ಲದೇ ಇಳಿದು ಬಿಡುತ್ತಾರೆ. ಇಂತಹ ಸ್ಥಿತಿಯಿಂದ ಹೊರಬಂದು ರಸ್ತೆ ನಿಯಮಗಳ ಪಾಲನೆಯಾಗಬೇಕು. ಇದರಿಂದ ಅಪಘಾತ ಸಂಖ್ಯೆ ತಗ್ಗುತ್ತವೆ ಎಂದರು.

ಹೆಲ್ಮೆಟ್‌ ಇಲ್ಲದೇ ವಾಹನ ಚಾಲನೆ ಮಾಡಿ ಅಪಘಾತವಾದರೆ ತಲೆಗೆ ಪೆಟ್ಟು ಬಿದ್ದು ಅನಾಹುತ ಸಂಭವಿರುತ್ತದೆ. ಇದನ್ನು ತಡೆಯಲು ಪ್ರತಿಯೊಬ್ಬರು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು. ಇಲ್ಲದಿದ್ದರೆ ದಂಡ ಹಾಕಬೇಕಾಗುತ್ತದೆ ಎಂದರು. ಪೊಲೀಸ್‌ ಸಿಬ್ಬಂದಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್‌ ರ್ಯಾಲಿ ಮೂಲಕ ಸಾರ್ವಜನಿಕರಲ್ಲಿ ಹೆಲ್ಮೆಟ್‌ದಿಂದ ಆಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಿ ಹೆಲ್ಮೆಟ್‌ ಕಡ್ಡಾಯ ಎಂಬ ಜಾಗೃತಿ ಜಾಥಾ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next