Advertisement

ಹೆಲ್ಮೆಟ್‌ ವಿತರಣೆ ಶ್ಲಾಘನೀಯ

05:16 PM Jan 04, 2018 | |

ಶಹಾಪುರ: ಪ್ರತಿಯೊಬ್ಬ ಬೈಕ್‌ ಸವಾರ ಹೆಲ್ಮೆಟ್‌ ಧರಿಸಬೇಕು. ಹೆಲ್ಮೆಟ್‌ ತೊಟ್ಟು ಬೈಕ್‌ ನಡೆಸುವುದರಿಂದ ಅಪಘಾತ ಸಂದರ್ಭದಲ್ಲಿ ನಿಮ್ಮ ಜೀವ ರಕ್ಷಣೆಗೆ ಇದು ಸಹಕಾರಿಯಾಗಲಿದೆ ಎಂದು ನಗರ ಠಾಣೆ ಸಿಪಿಐ ನಾಗರಾಜ ಹೇಳಿದರು. ಭೀಮರಾಯನ ಗುಡಿ ಹತ್ತಿರದ ಶ್ರೀಮಣಿಕಂಠ ಕಾಟನ್‌ ಜಿನ್ನಿಂಗ್‌ ಇಂಡಸ್ಟ್ರೀಜ್‌ ವತಿಯಿಂದ ಆಯೋಜಿಸಿದ್ದ ಉಚಿತ ಹೆಲ್ಮೆಟ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಾನವನಾಗಿ ಜನ್ಮವೆತ್ತ ಮೇಲೆ ಒಂದಿಲ್ಲೊಂದು ದಿನ ಸಾವು ನಿಶ್ಚಿತ. ಆದರೆ ಸಾವನ್ನು ನಮ್ಮ ಕೈಯಾರ ಬರಮಾಡಿಕೊಳ್ಳುವುದಕ್ಕಿಂತ ಆದಷ್ಟು ಎಚ್ಚರವಹಿಸಬೇಕು ಎಂದರು.

Advertisement

ಮಣಿಕಂಠ ಕಾಟನ್‌ ಮಿಲ್‌ ಮಾಲೀಕರು ಮತ್ತು ಅವರ ಸಹೋದರ ಹೆಲ್ಮೆಟ್‌ ಉಚಿತವಾಗಿ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ. ಉತ್ತಮ ಕಾರ್ಯಕ್ಕೆ ನಾಗರಿಕರು ಕೈಲಾದ ಸಹಾಯ ಸಹಕಾರ ನೀಡಬೇಕು. ಅಪಘಾತ ಸಂದರ್ಭದಲ್ಲಿ ಜೀವ ಕಳೆದುಕೊಂಡ ಎಷ್ಟೋ ಕುಟುಂಬಗಳು ಇಂದು ಬೀದಿಪಾಲಾಗಿವೆ. ಸಾಕಷ್ಟು ನಿದರ್ಶನಗಳು ನಿಮ್ಮ ಕಣ್ಮುಂದಿವೆ. ಆದ್ದರಿಂದ ಹೆಲ್ಮೆಟ್‌ ಧರಿಸಿ ಜೀವ ಉಳಿಸಿ ಎಂದು ಮನವಿ ಮಾಡಿದರು. ಗ್ರಾಮೀಣ ಸಿಪಿಐ ಮಹ್ಮದ್‌ ಸಿರಾಜ್‌ ಮಾತನಾಡಿ, ಹೆಲ್ಮೆಟ್‌ ನಿಮ್ಮ ಜೀವ ರಕ್ಷಕ. ಇದನ್ನು ಸಮರ್ಪಕವಾಗಿ ಬಳಸಬೇಕು. ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಲ್ಮೆಟ್‌ ಬಳಸುತ್ತಾರೆ. ಕೆಲವು ನಗರ ಪ್ರದೇಶದಲ್ಲಿ ಇಂದಿಗೂ ಹೆಲ್ಮೆಟ್‌ ಬಳಕೆ ಆಗುತ್ತಿಲ್ಲ ಎಂದು ತಿಳಿಸಿದರು.

ಮಣಿಕಂಠ ಕಾಟನ್‌ ಜಿನ್ನಿಂಗ್‌ ಮಿಲ್‌ ವತಿಯಿಂದ ಉಚಿತ ಹೆಲ್ಮೆಟ್‌ ವಿತರಣೆ ಉತ್ತಮ ಕಾರ್ಯವಾಗಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಅಗತ್ಯವಿದೆ. ಹೆಲ್ಮೆಟ್‌ ಪಡೆದುಕೊಂಡ ಪ್ರತಿಯೊಬ್ಬರು ಹತ್ತು ಜನಕ್ಕೆ ಈ ಕುರಿತು ಹೆಲ್ಮೆಟ್‌ ಪಡೆದುಕೊಳ್ಳುವಂತೆ ಸೂಚಿಸಬೇಕು ಎಂದು ಕರೆ ನೀಡಿದರು. ಕಾಟನ್‌ ಮಿಲ್‌ ಮಾಲೀಕ ಬಿ.ಎ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಭೀ. ಗುಡಿ ಪಿಎಸ್‌ಐ ತಿಪ್ಪಣ್ಣ ರಾಠೊಡ, ಪಿಎಸ್‌ಐ ಜಯಶ್ರೀ ಉಪಸ್ಥಿತರಿದ್ದರು. ಗುರು ಮಣಿಕಂಠ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next