Advertisement

ಹಲೋ ಮೋಟೋ: ಹೊಸ ಬೈಕುಗಳ ಹವಾ!

08:44 AM Jul 30, 2019 | keerthan |

ಸಿ.ಎಫ್ ಮೋಟೋ ಸಂಸ್ಥೆ 300NK, 650NK, 650GT ಮತ್ತು 650GT ಎಂಬ ನಾಲ್ಕು ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಬೈಕರ್‌ಗಳು ಇವುಗಳನ್ನು ರೈಡ್‌ ಮಾಡಲು ಕಾತರರಾಗಿದ್ದಾರೆ. ಚೀನಾ ಮೂಲದ ಸಂಸ್ಥೆಯಾಗಿರುವ ಸಿಎಫ್.ಮೋಟೋ, ಬೆಂಗಳೂರು ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಎಎಂಡಬ್ಲ್ಯು ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತದಲ್ಲಿ ಸಿ.ಎಪ್‌ ಮೋಟೋ ಬೈಕುಗಳ ಜೋಡಣೆ ಮತ್ತು ಮಾರಾಟದ ಜವಾಬ್ದಾರಿಯನ್ನು ಎಎಂಡಬ್ಲ್ಯುಸಂಸ್ಥೆ ವಹಿಸಿಕೊಂಡಿದೆ. ಕಿಟ್ ರೂಪದಲ್ಲಿ ಬರುವ ಎಲ್ಲಾ ಬಿಡಿಭಾಗಗಳನ್ನು ಎಎಂಡಬ್ಲ್ಯು ತನ್ನ ಪ್ಲಾಂಟ್‌ನಲ್ಲಿ ಅಸೆಂಬಲ್ ಮಾಡಲಿದೆ. ಅಚ್ಚರಿಯ ಸಂಗತಿಯೆಂದರೆ ಯುರೋಪ್‌, ದಕ್ಷಿಣ ಏಷ್ಯಾ, ದಕ್ಷಿಣ ಆಫ್ರಿಕಾ ಮತ್ತಿತರ ಭಾಗಗಳಲ್ಲಿ ಸಿ.ಎಫ್ ಮೋಟೋ, ಕೆಟಿಎಂ ಜೊತೆಗೇ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ, ಎರಡೂ ಬೈಕುಗಳ ನಡುವೆ ವಿನ್ಯಾಸದಲ್ಲಿ ಸಾಮ್ಯತೆ ಗುರುತಿಸಬಹುದಾಗಿದೆ. ಸಿ.ಎಫ್ ಮೋಟೋ 1989ರಲ್ಲಿ ಸ್ಥಾಪನೆಯಾದ ಕಂಪನಿಯಾಗಿದ್ದು, ಅಲ್ಲಿ ಎಟಿವಿ (ಆಲ್ ಟೆರೇನ್‌ ವೆಹಿಕಲ್), ನ್ಪೋರ್ಟ್ಸ್ ಎಂಜಿನ್‌ ಮತ್ತಿತರ ವಾಹನಗಳ ಬಿಡಿಭಾಗಗಳ ತಯಾರಿಯಲ್ಲಿ ಮುಂಚೂಣಿಯಲ್ಲಿದೆ.

Advertisement

ದೈನಂದಿನ ಬಳಕೆಗೆ
ಕಂಪನಿ ಬಿಡುಗಡೆ ಮಾಡಿರುವ ನಾಲ್ಕು ಬೈಕುಗಳಲ್ಲಿ ಕಡಿಮೆ ಬೆಲೆ ಇರುವುದು ಸಿಎಫ್300ಎನ್‌ಕೆ ಬೈಕಿಗೆ. ಅದೂ ಕಡಿಮೆಯೇನಲ್ಲ, ಆ ಬೈಕ್‌ಗೆ ಎರಡರಿಂದ ಎರಡೂವರೆ ಲಕ್ಷ ರು. ಬೆಲೆ ನಿಗದಿ ಪಡಿಸಲಾಗಿದೆ. ಇದು ಕೆ.ಟಿಎಂ 250 ಬೈಕಿಗೆ ಪೈಪೋಟಿ ನೀಡಲಿದೆ. ಎಲ್ಇಡಿ ಹೆಡ್‌ಲೈಟ್, ಟಿಎಫ್ಟಿ ಕನ್ಸೋಲ್, 6 ಸ್ಪೀಡ್‌ ಗೇರ್‌ ಬಾಕ್ಸ್‌ ಮತ್ತು ಎಬಿಎಸ್‌ ತಂತ್ರಜ್ಞಾನ ಈ ನೇಕೆಡ್‌ ಸ್ಟ್ರೀಟ್ ಬೈಕಿನ ವೈಶಿಷ್ಟ್ಯವಾಗಿದೆ. ಎರಡು ಬದಿಗಳಲ್ಲಿಯೂ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಇದು 30  33 ಕಿ.ಮೀ ಮೈಲೇಜನ್ನು ನೀಡುವುದೆಂದು ಕಂಪನಿ ಘೋಷಿಸಿದೆ.

650 ಸಿಸಿ ಶ್ರೇಣಿ
ಉಳಿದ ಮೂರು ಬೈಕುಗಳೂ ಸಿಎಫ್650ಎನ್‌ಕೆ ಸ್ಟ್ರೀಟ್ಫೈಟರ್‌, ಸಿಎಫ್650ಎಂಟಿ ಅಡ್ವೆಂಚರ್‌ ಟೂರರ್‌ ಮತ್ತು ಸಿಎಫ್650ಜಿಟಿ ನ್ಪೋರ್ಟ್ಸ್ ಟೂರರ್‌ 650 ಸಿಸಿ ಹೊಂದಿದೆ. ಅಲ್ಲದೆ ಅವೆಲ್ಲವಕ್ಕೂ 649ಸಿಸಿಯ ಟ್ವಿನ್‌ ಸಿಲಿಂಡರ್‌ ಎಂಜಿನ್ನುಗಳನ್ನೇ ನೀಡಲಾಗಿದೆ. ಇವುಗಳ ಬೆಲೆ 4  5.5 ಲಕ್ಷಗಳ ವರೆಗೂ ಇದೆ. ಸಿಎಫ್ ಮೋಟೋ ಬೈಕುಗಳು ಚೀನಾ­ದಲ್ಲಿ ನಿರ್ಮಾಣ ಗೊಂಡಿದ್ದರೂ ಅವುಗಳ ವಿನ್ಯಾಸ ಆಸ್ಟ್ರಿಯಾದಲ್ಲಿ ಮಾಡಲ್ಪಟ್ಟಿದೆ. ಭಾರತದಲ್ಲಿ ಬಿಡುಗಡೆಯಾಗಿರುವ ನಾಲ್ಕೂ ಬೈಕುಗಳು ಆಧುನಿಕ ಸವಲತ್ತುಗಳಿಂದ ಕಂಗೊಳಿ­ಸುತ್ತಿರುವುದರಿಂದ ಎಲ್ಲಾ ವಯೋಮಾನ ಹಾಗೂ ಅಗತ್ಯಗಳಿಗೆ ತಕ್ಕಂತೆ ಇರುವುದರಿಂದಲೂ ಅವನ್ನು ಖರೀದಿಸಲು, ಸವಾರಿ ಮಾಡಲು ಬೈಕರ್‌ಗಳು ಕಾತರರಾಗಿದ್ದಾರೆ.

650ಎನ್‌ಕೆ
* 4.35 ಲಕ್ಷ ರು. ಬೆಲೆ
* 17 ಲೀಟರ್‌ ಟ್ಯಾಂಕ್‌
* ಹೈಡ್ರಾಲಿಕ್‌ ಬ್ರೇಕ್‌
* 206 ಕೆ.ಜಿ ತೂಕ
*60 ಬಿಎಚ್‌ಪಿ

650ಎಂಟಿ
* 5 ಲಕ್ಷ ರು.
* 18 ಲೀಟರ್‌ ಟ್ಯಾಂಕ್‌
* ಹೈಡ್ರಾಲಿಕ್‌ ಬ್ರೇಕ್‌
* 218 ಕೆಜಿ ತೂಕ
* 69ಬಿಎಚ್‌ಪಿ

Advertisement

650ಜಿಟಿ
* 6 ಲಕ್ಷ ರು.
* 19 ಲೀಟರ್‌ ಟ್ಯಾಂಕ್‌
* ಹೈಡ್ರಾಲಿಕ್‌ ಬ್ರೇಕ್‌
* 226 ಕೆ.ಜಿ ತೂಕ
* 61 ಬಿಎಚ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next