Advertisement
ಎಲ್ಲಿಂದ ಹತ್ತೋದು?ಹೆಲಿ ಟ್ಯಾಕ್ಸಿ ಸೌಲಭ್ಯ ಈಗ ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಕಾರ್ಯಾಚರಿಸುತ್ತಿದೆ. ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸಿ- ಡಾಟ್ ಕಟ್ಟಡದ ಹಿಂಭಾಗದ, ಐಟಿಐ ಮೈದಾನದಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿ ಟ್ಯಾಕ್ಸಿ ಹೊರಡುತ್ತದೆ. ನಗರದ ವಿವಿಧೆಡೆಗಳಲ್ಲಿ ಹೆಲಿಪ್ಯಾಡ್ ಗಳಿದ್ದು, ಅನುಮತಿ ಸಿಕ್ಕ ನಂತರ ಮಿಕ್ಕ ಕಡೆಗಳಿಂದಲೂ ಹೆಲಿಟ್ಯಾಕ್ಸಿಯನ್ನು ಹತ್ತಬಹುದು.
1. ಹೆಲಿ ಟ್ಯಾಕ್ಸಿ ಮೊಬೈಲ್ ಆ್ಯಪ್ ಅನ್ನು ಮೊಬೈಲ್ ಫೋನಿನಲ್ಲಿ ಇನ್ ಸ್ಟಾಲ್ ಮಾಡಿಕೊಂಡು ಅದರ ಮುಖಾಂತರ ಬುಕ್ ಮಾಡಬಹುದು. ಹೆಲಿ ಟ್ಯಾಕ್ಸಿಯನ್ನು ಮುಂಗಡವಾಗಿಯೂ ಬುಕ್ ಮಾಡಬಹುದು. ಅಂದರೆ, ಎಷ್ಟೋ ದಿನಗಳ ಬಳಿಕ ಬುಕ್ ಮಾಡಬೇಕೆಂದರೆ “ಪ್ಲೆ„ ಲೇಟರ್’ ಆಯ್ಕೆಯನ್ನು ಆರಿಸಿಕೊಳ್ಳಬಹುದು.
2. ವಿಮಾನ ನಿಲ್ದಾಣದಲ್ಲಿ ಹೆಲಿ ಟ್ಯಾಕ್ಸಿಯ ಕೌಂಟರ್ ಇದ್ದು, ಅದನ್ನು ಪ್ರಯಾಣಿಕರು ಬಳಸಿಕೊಳ್ಳಬಹುದಾಗಿದೆ.
3. ಕಸ್ಟಮರ್ ಕೇರ್ ಸೌಲಭ್ಯವೂ ಇರುವುದರಿಂದ ದಿನದ ಯಾವುದೇ ಹೊತ್ತಿನಲ್ಲಿ ಬೇಕಾದರೂ ಹೆಲಿ ಟ್ಯಾಕ್ಸಿ ಬುಕ್ ಮಾಡಬಹುದು. “ಸ್ಟಾರ್ಟಪ್ ಕಂಪನಿಯೊಂದನ್ನು ಹುಟ್ಟುಹಾಕಿದ್ದ ನನಗೆ ಕೆಲಸದ ನಿಮಿತ್ತ ಗೋವಾ ಮತ್ತು ಬೆಂಗಳೂರಿನ ಓಡಾಟ ಯಾವಾಗಲೂ ಇದ್ದಿದ್ದೇ. ತಿಂಗಳ ಹಿಂದೆ ಯಾವುದೋ ಪತ್ರಿಕೆಯ ಪುಟ ತಿರುವಿದಾಗ, ನಮ್ಮ ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಶುರುವಾಗಲಿದೆ ಎಂಬ ಸುದ್ದಿ ಕಣ್ಣಿಗೆ ಬಿದ್ದಿತ್ತು. ಆದಷ್ಟು ಬೇಗ ಆ ದಿನ ಬರಲಿಯೆಂದು ಕಾದಿದ್ದೆ. ಆದರೆ, ಹೆಲಿ ಟ್ಯಾಕ್ಸಿಯ ಪ್ರಥಮ ಹಾರಾಟದಲ್ಲಿ ನಾನೂ ಭಾಗಿಯಾಗುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ.
Related Articles
Advertisement
ಇಂಥದ್ದೇ ಅನುಭವ ಅಜಯ್ ಕುಮಾರ್ ಅವರದು ಕೂಡ. ವಿಮಾನ ನಿಲ್ದಾಣವನ್ನು ಹದಿನೈದೇ ನಿಮಿಷಗಳಲ್ಲಿ ತಲುಪಿದ್ದು ಅವರಿಗೆ ಎಷ್ಟೋ ದಿನಗಳ ಕನಸು ನನಸಾದಂತಾಗಿದೆ. ವಾಹನಗಳ ದಟ್ಟಣೆಯಲ್ಲಿ ಕಿಟಕಿ ಬಂದ್ ಮಾಡಿಕೊಂಡು ಎಫ್.ಎಂ.ಗೆ ಕಿವಿಗೊಡುತ್ತಾ ಗಂಟೆಗಟ್ಟಲೆ ಕೂತುಕೊಳ್ಳುವುದರಿಂದ ಮುಕ್ತಿ ಸಿಕ್ಕಾಗ ಖುಷಿ ಪಡುವುದು ಸಹಜವೇ.
ಎಲ್ಲವೂ ಚೆನ್ನಬೇಗ ತಲುಪುವುದರಿಂದ ಸಮಯ ಉಳಿತಾಯವಾಗುತ್ತೆ ಅನ್ನೋದು ಒಂದು ಸಂತಸವಾದರೆ ಮತ್ತೂಂದು ಸಂತಸ ನಮ್ಮ ನಗರವನ್ನು ಮೇಲಿನಿಂದ ನೋಡುವುದು. ಇಷ್ಟು ದಿನ ಪಕ್ಷಿಗಳು ಹೇಗೆ ನೋಡುತ್ತಿದ್ದವೋ ಅಷ್ಟೇ ಎತ್ತರದಿಂದ ನಗರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಮತ್ತೂಂದು ಸಂತಸ. ಹೆಲಿಕಾಪ್ಟರ್ ಮೇಲೇರುತ್ತಿದ್ದಂತೆ ಕಟ್ಟಡಗಳು, ರಸ್ತೆಗಳು, ವಾಹನ ಸಾಲುಗಳು, ಕೆರೆಗಳು ಎಲ್ಲವೂ ರಮಣೀಯವಾಗಿ ಕಾಣುವವು. “ರಸ್ತೆಗಳಲ್ಲಿ ಹೋಗುವಾಗ ಟ್ರಾಫಿಕ್, ಹಾರ್ನ್, ಹೊಗೆ ಎಲ್ಲವನ್ನೂ ಶಪಿಸಿಕೊಂಡು ಹೋಗುತ್ತಿದ್ದೆವು, ಅವೇ ರಸ್ತೆಗಳನ್ನು ಮೇಲಿಂದ ಹಾರಿ ಹೋಗುವಾಗ ಯಾರಿಗೇ ಆದರೂ ರೋಮಾಂಚನವಾವಾಗುತ್ತೆ’ ಎನ್ನುತ್ತಾರೆ ಅಜಯ್ ಕುಮಾರ್.ಹ್ರಿಷ್ ತೋಟ ಎಂಬುವವರಂತೂ ತಮ್ಮ ಮೊದಲ ಪ್ರಯಾಣದ ಅನುಭವವನ್ನು ಫೋಟೋಗಳಲ್ಲಿ ಬಹಳ ಚೆನ್ನಾಗಿ ಸೆರೆ ಹಿಡಿದಿದ್ದಾರೆ. ಅವರು, “ನಾನು ಇದಕ್ಕೆ ಮೊದಲು ಹೆಲಿಕಾಪ್ಟರ್ ಹತ್ತಿದವನಲ್ಲ. ಹೀಗಾಗಿ ಹೆಲಿ ಟ್ಯಾಕ್ಸಿ ಏರುವಾಗ ಮೊದಲಿಗೆ ಭಯ ಆಯ್ತು. ಆದರೆ ಒಳಗೆ ಕೂತ ನಂತರ ಎಲ್ಲಾ ಆರಾಮಾಯ್ತು. ನಮ್ಮ ನಗರ ಎಷ್ಟು ಸುಂದರ ಅಂತ ಅನ್ನಿಸದೇ ಇರದು. ಪ್ರಯಾಣ ಶುಲ್ಕ ಕಡಿಮೆ ಇದ್ದಿದ್ದರೆ ಚೆನ್ನಾಗಿತ್ತು ಅನ್ನೋದು ನನ್ನ ಅಭಿಪ್ರಾಯ.’ ಎಂದು ತಮ್ಮ ಅನುಭವ ಹಂಚಿಕೊಂಡರು. ಹ್ರಿಶ್ ಅವರಿಗೆ ತುಂಬಾ ಇಷ್ಟವಾಗಿದ್ದು ನಗರದ ಕೆರೆಗಳ ಸೌಂದರ್ಯ! ಹೆಲಿ ಟ್ಯಾಕ್ಸಿಗೆ ಸ್ಪೂರ್ತಿ
ಹೆಚ್ಚು ಕಡಿಮೆ ಬೆಂಗಳೂರಿನಷ್ಟೆ ವಿಸ್ತಾರವಿರುವ ಬ್ರೆಝಿಲ್‌ನ ಸಾವೋ ಪಾಲೋ ನಗರದಲ್ಲಿ ಪ್ರತಿನಿತ್ಯ ಸುಮಾರು 300 ಹೆಲಿಕಾಪ್ಟರ್ ಟ್ಯಾಕ್ಸಿಗಳು ಓಡಾಡುತ್ತವಂತೆ. ಬೆಂಗಳೂರಿನಲ್ಲಿ ಹೆಲಿ ಟ್ಯಾಕ್ಸಿ ಆರಂಭಿಸಲು ಸಾವೋ ಪೋಲೋ ಹೆಲಿ ಟ್ಯಾಕ್ಸಿಗಳೇ ಸ್ಫೂರ್ತಿ. ವೇಳಾಪಟ್ಟಿ ಮತ್ತು ದರ
ಬೆಳಗ್ಗೆ ಮೂರು ಟ್ರಿಪ್ ಮತ್ತು ಸಂಜೆ ಮೂರು ಟ್ರಿಪ್‌ನಂತೆ ದಿನಕ್ಕೆ ಒಟ್ಟು ಆರು ಟ್ರಿಪ್‌ಗ್ಳನ್ನು ಹೆಲಿಕಾಪ್ಟರ್ ಮಾಡಲಿದೆ. ಬೆಳಗ್ಗೆ 6.30ರಿಂದ 9.45ರ ನಡುವೆ ಬೆಳಗ್ಗಿನ ಟ್ರಿಪ್ ಕಾರ್ಯಾಚರಿಸಿದರೆ, ಸಂಜೆ 3.15ರಿಂದ 6ರ ನಡುವೆ ಸಂಜೆಯ ಟ್ರಿಪ್ ಕಾರ್ಯಾಚರಿಸಲಿದೆ. ಇವೆರಡು ಟ್ರಿಪ್‌ಗ್ಳನ್ನು ಹೊರತುಪಡಿಸಿ ಬೆಳಗ್ಗಿನ ಮತ್ತು ಸಂಜೆಯ ಶಿಫ್ಟಿನ ನಡುವೆಯೂ ಪ್ರಯಾಣಿಕರು ಹೆಲಿಟ್ಯಾಕ್ಸಿಯನ್ನು ಬಳಸಿಕೊಳ್ಳಬಹುದು. ಆದರೆ, ಒಂದೇ ಶರತ್ತು… ಅದೇನೆಂದರೆ, ಪೂರ್ತಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಬೇಕು. ಬೆಳಗ್ಗಿನ ಮತ್ತು ಸಂಜೆಯ ಟ್ರಿಪ್‌ಗ್ಳಲ್ಲಿ ಶೇರಿಂಗ್ ಆಧಾರದಲ್ಲಿ ಬಾಡಿಗೆ ಪಡೆಯಬಹುದು. ಅಂದರೆ, ಪ್ರತಿ ಪ್ರಯಾಣಿಕರು 4,130 ರೂ. ತೆರಬೇಕು. ಪೂರ್ತಿ ಹೆಲಿಕಾಪ್ಟರ್ ಅನ್ನು ಬುಕ್ (ಚಾರ್ಟರ್) ಮಾಡಬೇಕೆಂದರೆ ಮೊತ್ತ ಹೆಚ್ಚುತ್ತದೆ. ಅಂದಹಾಗೆ, ಯಾರು ಬೇಕಾದರೂ ಹೆಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದು. ಯಾವ ಹೆಲಿಕಾಪ್ಟರ್?
ಬೆಲ್- 407 ಎಂಬ ಹೆಲಿಕಾಪ್ಟರ್ ಅನ್ನು ಟ್ಯಾಕ್ಸಿಯಾಗಿ ಬಳಸಿಕೊಳ್ಳಲಾಗುತ್ತಿದೆ. 6 ಆಸನಗಳನ್ನು ಇದು ಹೊಂದಿದೆ. ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕವನ್ನು ಕೊಂಡೊಯ್ಯಲು ಆಗದಿರುವುದರಿಂದ ಪ್ರಯಾಣಿಕರಿಗೆ 15 ಕೆ.ಜಿ ಲಗೇಜ್ ಮಿತಿ ಇದೆ. ತೂಕ ಅದಕ್ಕಿಂತ ಹೆಚ್ಚಿದರೆ ಸಂಸ್ಥೆಗೆ ಸೇರಿದ ಕೊರಿಯರ್ ವಾಹನದಲ್ಲಿ ಲಗೇಜನ್ನು ಏರ್‌ಪೋರ್ಟ್‌ಗೆ ಸಾಗಿಸಲಾಗುವುದು. ಅದರ ಶುಲ್ಕ ಪ್ರತ್ಯೇಕ. ಹರ್ಷ