ನವದೆಹಲಿ : ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ ಮತ್ತು ಅವರ ಪತ್ನಿ ತೆರಳುತ್ತಿದ್ದ ಖಾಸಗಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಆಗಿರುವ ಘಟನೆ ಭಾನುವಾರ ನಡೆದಿದೆ.
ಘಟನೆಯಿಂದ ಹೆಲಿಕಾಪ್ಟರ್ ನಲ್ಲಿದ್ದ ಯಾರಿಗೂ ತೊಂದರೆಯಾಗಿಲ್ಲ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯು ಕೇರಳದ ಪನಂಗಾಡ್ ಎಂಬಲ್ಲಿರುವ ಕೇರಳ ಮೀನುಗಾರಿಕೆ ಹಾಗೂ ಸಮುದ್ರ ಅಧ್ಯಯನ ವಿಶ್ವವಿದ್ಯಾಲಯದ ಆವರಣದಲ್ಲಿನಡೆದಿದೆ.
ಯುಸುಫ್ ಅಲಿ ದಂಪತಿ ಜೊತೆಗೆ ಐದು ಮಂದಿ ಹೆಲಿಕಾಪ್ಟರ್‌ನಲ್ಲಿದ್ದರು. ಪ್ರಯಾಣಿಕರು ಮತ್ತು ಪೈಲಟ್‌ಗಳು ಸುರಕ್ಷಿತವಾಗಿದ್ದು ಎಲ್ಲರನ್ನೂ ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಬಂದಿದೆ.
ಇನ್ನು ಲೇಕ್ ಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಮ್ಮ ಸಂಬಂಧಿಗಳನ್ನು ನೋಡಲು ಯುಸುಫ್ ಅಲಿ ದಂಪತಿ ಪ್ರಯಾಣ ಬೆಳೆಸಿದ್ದಾಗ ಈ ಘಟನೆ ನಡೆದಿದೆ.
ಬೆಳಗ್ಗೆ 8.45ರ ಸುಮಾರಿಗೆ ಹೆಲಿಕಾಪ್ಟರ್ ನೆಲಕಪ್ಪಳಿಸಿದಾಗ ಭಾರಿ ಶಬ್ದವನ್ನು ಕೇಳಿ ಬಂದಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಇನ್ನು ವಿವಿ ಆವರಣದಲ್ಲಿ ಮಳೆ ಬರುತ್ತಿದ್ದು, ಇದೇ ಕಾರಣದಿಂದ ಕ್ರಾಶ್ ಆಗಿದೆ ಎನ್ನಲಾಗಿದೆ.