ದುಬಾೖ: ಇರಾನ್ ಮತ್ತು ಇಸ್ರೇಲ್ ನಡುವಿನ ಮುಸುಕಿನ ಗುದ್ದಾಟದ ನಡುವೆಯೇ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೇನ್ ಅಮೀರಬ್ ದೊಲ್ಲಾಹಿಯನ್ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿ ಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ ಎನ್ನಲಾಗುತ್ತಿದೆ.
ಅಜರ್‌ಬೈಜಾನ್‌ನಲ್ಲಿ ಅಣೆಕಟ್ಟು ಉದ್ಘಾ ಟಿಸಲು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಇರಾನ್ ಸರಕಾರಿ ಮಾಧ್ಯಮದ ಟಿವಿ ವರದಿ ಮಾಡಿದೆ.
ಅಧ್ಯಕ್ಷರ ಹೆಲಿಕಾಪ್ಟರ್‌ಗೆ ಬೆಂಗಾವಲಾಗಿ ತೆರಳಿದ್ದ ಇನ್ನೆರಡು ಹೆಲಿಕಾಪ್ಟರ್‌ಗಳು ವಾಪಸಾಗಿದ್ದು, ಪ್ರತಿಕೂಲ ಹವಾ ಮಾನದಿಂದಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಭವಿಸಿದ ಸ್ಥಳ ಇರಾನ್‌ನ ದೊಡ್ಡ ಪಟ್ಟಣಗಳಲ್ಲಿ ಒಂದಾಗಿರುವ ತಬ್ರಿಜ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರತಿಕೂಲ ಹವಾಮಾನ, ರಾತ್ರಿಯಾದ ಕಾರಣ ಹೆಲಿಕಾಪ್ಟರ್ ಮೂಲಕ ಶೋಧ ಕಾರ್ಯಾಚರಣೆಯನ್ನು ಕೈಬಿಡ ಲಾಗಿದ್ದು, ಕಾಲ್ನಡಿಗೆ ಮೂಲಕ ಶೋಧ ಆರಂಭಿಸಲಾಗಿದೆ.
ಹೆಲಿಕಾಪ್ಟರ್ ಪತನವಾಗಿರುವ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸ ಲಾಗುತ್ತಿದೆ ಎಂದು ಹೇಳಲಾಗಿದೆ. ರೈಸಿ ಮತ್ತು ಇತರರು ಸುರಕ್ಷಿತವಾಗಿ ಮರಳಲೆಂದು ದೇಶದ ಜನರು ಪ್ರಾರ್ಥಿಸುತ್ತಿದ್ದಾರೆ. ಇರಾನ್‌ನ ಸುದ್ದಿ ಸಂಸ್ಥೆ ಇರ್ನಾ ಮತ್ತು ಸರಕಾರಿ ಸುದ್ದಿ ವಾಹಿನಿ ಒಟ್ಟಾರೆ ಘಟನೆಯ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ನೀಡುತ್ತಿಲ್ಲ. ಪರ್ವತ ಪ್ರದೇಶ ಗಳಲ್ಲಿ ಉಂಟಾಗಿರುವ ಪ್ರತಿಕೂಲ ಹವಾಮಾನದಿಂದಾಗಿ ಅಲ್ಲಿಗೆ ಕ್ಷಿಪ್ರ ವಾಗಿ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರ ತಿಳಿಸಿದೆ.