Advertisement

ಹೆಜ್ಜೆಗುರುತು ಪುಸ್ತಕ ಬಿಡುಗಡೆ

09:21 AM Jul 15, 2019 | Lakshmi GovindaRaj |

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಹಿತವನ್ನು ಕಾಪಾಡುವ ಸಲುವಾಗಿ ಮತ್ತು ಚಿತ್ರರಂಗವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವನ್ನು ಸ್ಥಾಪಿಸಿದ ಹಿರಿಯ ನಿರ್ಮಾಪಕ, ನಿರ್ದೇಶಕ ದಿ. ಹೆಚ್‌.ಎಂ.ಕೆ ಮೂರ್ತಿ ಅವರ ಸಮಗ್ರ ಸಾಧನೆಯ ಹಾದಿಯನ್ನು ದಾಖಲಿಸಿರುವ ಹೆಜ್ಜೆಗುರುತು ಪುಸ್ತಕದ ಲೋಕಾರ್ಪಣೆ ಸಮಾರಂಭ ಇತ್ತೀಚೆಗೆ ನೆರವೇರಿತು.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಎಸ್‌.ಎ ಚಿನ್ನೇಗೌಡ, ಬಸಂತಕುಮಾರ್‌ ಪಾಟೀಲ್‌, ಕೆ.ಸಿ.ಎನ್‌ ಚಂದ್ರಶೇಖರ್‌, ವಾಣಿಜ್ಯ ಮಂಡಳಿಯ ಈಗಿನ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಕಲಾವಿದರಾದ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ರಾಮದಾಸ್‌ ನಾಯ್ಡು, ಅಶೋಕ್‌, ರಾಜಕುಮಾರ್‌ ಉಪಾಧ್ಯ,

ಗುರುಕಿರಣ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, ಹೆಚ್‌.ಎಂ.ಕೆ ಮೂರ್ತಿ ಅವರ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು. ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಥಮಗಳಿಗೆ ಕಾರಣರಾದ ಹೆಚ್‌.ಎಂ.ಕೆ ಮೂರ್ತಿ ಅವರ ಬದುಕು-ಸಾಧನೆಯ ಈ ಕೃತಿಯನ್ನು ಹಿರಿಯೂರು ರಾಘವೇಂದ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next