Advertisement
ದಿನವಿಡೀ ನಡೆದ ಕ್ರೀಡೋತ್ಸವದಲ್ಲಿ ಮಕ್ಕಳ ಹಾಗೂ ಸದಸ್ಯರ ವಯೋ ಮಿತಿಗೆ ಅನುಗುಣವಾಗಿ ಹಮ್ಮಿ ಕೊಂಡಿರುವ ವಿವಿಧ ಕ್ರೀಡೆಗಳಲ್ಲಿ ಸಮಾಜ ಬಾಂಧವರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೋತ್ಸವಕ್ಕೆ ಮೆರುಗನ್ನು ನೀಡಿದರು. ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ಅತಿಥಿ- ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಂಘದ ಹಿರಿಯ ಸದಸ್ಯರುಗಳು ವಿತರಿಸಿ ಶುಭಹಾರೈಸಿದರು. ಸಮಾರೋಪ ಸಮಾರಂಭ ಕಾರ್ಯಕ್ರಮದ ವೇದಿಕೆ ಯಲ್ಲಿ ಅತಿಥಿಯಾಗಿ ಸಂಘದ ಮಾಜಿ ಅಧ್ಯಕ್ಷ ವಿ. ಎಸ್. ಹೆಗ್ಡೆ, ಪುಣೆಯ ಹೊಟೇಲ್ ಉದ್ಯಮಿ, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಆಟಗಾರ ಹಾಗೂ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಗಳ ಪ್ರಾಯೋಜಕರಾದ ವಿನಯ್ ಹೆಗ್ಡೆ, ಥಾಣೆಯ ಹೊಟೇಲ್ ಉದ್ಯಮಿ ಹಾಗೂ ದಾನಿ ಸಚೀಂದ್ರ ಹೆಗ್ಡೆ, ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಸಂಜೀವ ಹೆಗ್ಡೆ, ಕಾರ್ಯದರ್ಶಿ ಶಂಕರ ಹೆಗ್ಡೆ, ಕೋಶಾಧಿಕಾರಿ ರಮೇಶ್ ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಹೆಗ್ಡೆ ಉಫಸ್ಥಿತರಿದ್ದು ವಿಜೇತ ತಂಡ ಗಳಿಗೆ ಟ್ರೋಪಿ ಹಾಗೂ ಪದಕಗಳನ್ನು ವಿತರಿಸಿದರು.
Related Articles
Advertisement
ಮಹಿಳೆಯರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಸುಜಾತಾ ಹೆಗ್ಡೆ ತಂಡ ಪ್ರಥಮ ಮತ್ತು ಹರ್ಷಲಾ ಹೆಗ್ಡೆ ತಂಡ ದ್ವಿತೀಯ, ಪುರುಷರ ಹಗ್ಗ ಜಗ್ಗಾಟದಲ್ಲಿ ದೇವದಾಸ್ ಹೆಗ್ಡೆ ನೇತೃತ್ವದ ಶಿರೂರು ಇಲೆವೆನ್ ತಂಡ ಪ್ರಥಮ ಹಾಗೂ ಜಯರಾಮ್ ಹೆಗ್ಡೆ ಕಲ್ಯಾಣ್ ನೇತೃತ್ವದ ಕಲ್ಯಾಣ್ ಇಲೆವೆನ್ ತಂಡ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿತು.
ದಿನವಿಡೀ ನಡೆದ ಕ್ರೀಡೋತ್ಸವವನ್ನು ಯುವ ವಿಭಾಗದ ಸದಸ್ಯರು ಹಾಗೂ ಸಮಿತಿಯ ಸದಸ್ಯರು ಮಹಿಳೆಯರು ಅಚ್ಚುಕಟ್ಟಾಗಿ ನೆರವೇರಿಸಿದರು. ಸಂಘದ ಹಿರಿಯ ಸದಸ್ಯರು, ತುಳು ಕೂಟ ಐರೊಲಿ ಇದರ ಸದಸ್ಯರು, ರಶ್ಮಿ ಕ್ಯಾಟರರ್ಸ್ ಇದರ ಸಿಬಂದಿ ವರ್ಗ, ಹೇಮಂತ್ ಸುರ್ತಾ ಮತ್ತು ಬಳಗದವರು ಉಪಸ್ಥಿತರಿದ್ದು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸ್ಪರ್ಧಾಳುಗಳಿಗೆ ಸಮವಸ್ತ್ರ ಟಿಶರ್ಟ್ ಇದರ ವ್ಯವಸ್ಥೆಯನ್ನು ಸದಾಶಿವ ಹೆಗ್ಡೆ ಐರೋಲಿ ಇವರ ನೆರವಿನಿಂದ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನವರು ಉಚಿತವಾಗಿ ನೀಡಿದ್ದರು.
ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ರವಿ ಹೆಗ್ಡೆ ಹೆರ್ಮುಂಡೆ ನಿರೂಪಿಸಿದರು. ಸಂಘದ ಆಡಳಿತ ಮಂಡಳಿ, ಯುವ ವಿಭಾಗ, ಮಹಿಳಾ ವಿಭಾಗದ ಸದಸ್ಯರು ಸಹಕರಿಸಿದರು.