Advertisement
ಜು. 25ರಂದು ಹೆಗ್ಗಡೆ ಭವನದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಇವರ ಸಂಚಾಲಕತ್ವದಲ್ಲಿ ಪೂರ್ಣಿಮಾ ಯತೀಶ್ ರೈ ಇವರ ಸಂಯೋಜನೆಯಲ್ಲಿ ಶ್ರೀ ವಿನಾಯಕ ಮಕ್ಕಳ ಹಾಗೂ ಮಹಿಳಾ ಯಕ್ಷಕಲಾ ತಂಡ, ಕಾಟಿಪಳ್ಳ, ಸುರತ್ಕಲ್ ಇವರ ಪ್ರಬುದ್ಧ ಮಹಿಳಾ ಕಲಾವಿದರಿಂದ ಹೆಗ್ಗಡೆ ಸೇವಾ ಸಂಘ ಇವರ ಆಶ್ರಯದಲ್ಲಿ ಹೆಗ್ಗಡೆ ಭವನ ಐರೋಲಿ ಜರಗಿದ ಸುದರ್ಶನ ಗರ್ವ ಭಂಗ – ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನದ ಸಭಾ ಕಾರ್ಯ ಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದು ಅವರು ಮಾತನಾಡಿದರು.
ಘಟಕದ ಅಧ್ಯಕ್ಷರಾದ ಸುರೇಶ ಶೆಟ್ಟಿ ಯೆಯ್ನಾಡಿ ಮಾತನಾಡಿ, ಹೆಗ್ಗಡೆ ಸೇವಾ ಸಂಘವು ನಮ್ಮ ಊರಿನ ಕಲಾವಿದರಿಗೆ ಪ್ರತಿವರ್ಷ ಹೆಗ್ಗಡೆ ಭವನದಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತಿರುವುದು ಕರ್ನಾಟಕದ ಸಂಸ್ಕೃತಿಗೆ ಮಾಡುವಂತಹ ದೊಡ್ಡ ಯೋಗದಾನ. ಸಂಸ್ಥೆಯ ಪರವಾಗಿ ಹೆಗ್ಗಡೆ ಸಮಾಜದವರನ್ನು ಅಭಿನಂದಿಸುತ್ತೇನೆ. ಹಾಗೆ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಪ್ರತಿ ವರ್ಷ ಇಂತಹ ಒಂದು ಕಾರ್ಯಕ್ರಮವನ್ನು ಮಾಡುತ್ತಿರುವುದು ಖಂಡಿತ ಶ್ಲಾಘನೀಯ ಎಂದರು.
Related Articles
Advertisement
ತುಳು ಕೂಟ ಐರೋಲಿ ಇದರ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರಿ ಅವರು ಮಾತನಾಡಿ, ಹೆಗ್ಗಡೆ ಸೇವಾ ಸಂಘವು ಕಲೆಯನ್ನು ಪ್ರೋತ್ಸಾಹ ಮುಂಬಯಿ ಮಹಾನಗರದಲ್ಲಿ ಮುಂಚೂಣಿಯಲ್ಲಿದೆ. ಅದರಿಂದ ಆ ಸಂಸ್ಥೆಯಲ್ಲಿ ಒಂದು ಕಲಾ ತಂಡವೇ ಹುಟ್ಟಿಕೊಂಡಿದೆ. ತುಳು ಕೂಟ ಬೆಳೆಯುವಲ್ಲಿ ಕೂಡ ಹೆಗ್ಗಡೆ ಸಮಾಜದ ಸಹಾಯ ಹಸ್ತ ಬಹಳಷ್ಟು ಇದೆ. ಒಂದೇ ಸಮಾಜಕ್ಕೆ ಸೀಮಿತವಿರದೆ ಎಲ್ಲರನ್ನು ಆದರಿಸುತ್ತಾರೆ ಎಂದು ನುಡಿದರು.
ವೇದಿಕೆಯುಲ್ಲಿ ಸಂಘದ ಕಾರ್ಯಾಧ್ಯಕ್ಷರು ಸಂಜೀವ ಹೆಗ್ಡೆ, ಸಮಾಜ ಸೇವಕ ಉದ್ಯಮಿ ಜಯಪ್ರಕಾಶ್ ಶೆಟ್ಟಿ, ಉದ್ಯಮಿ ಯಶವಂತ್ ಶೆಟ್ಟಿ ಉಪಸ್ಥಿತರಿದ್ದರು. ತಂಡದ ರೂವಾರಿ ಪೂರ್ಣಿಮಾ ಯತೀಶ್ ರೈ ಮತ್ತು ಅಜೆಕಾರು ಬಾಲಕೃಷ್ಣ ಶೆಟ್ಟಿ ಇವರನ್ನು ಹೆಗ್ಗಡೆ ಸೇವಾ ಸಂಘದ ಪರವಾಗಿ ಗೌರವಿಸಲಾಯಿತು.
ಪ್ರಭಾಕರ್ ಹೆಗ್ಡೆ ಸಮ್ಮಾನ ಪತ್ರ ವಾಚಿಸಿದರು. ನವೀನ್ ಹೆಗ್ಡೆ ಸಹಕರಿಸಿದರು. ಕಾರ್ಯಕ್ರಮವನ್ನು ರಂಗ ನಟ ಅನಿಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ನವಿ ಮುಂಬಯಿ ಹಾಗೂ ಮುಂಬಯಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸಂಘದ ಮಾಜಿ ಅಧ್ಯಕ್ಷ ರತ್ನಾಕರ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಬಿ. ಗೋಪಾಲ್ ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ಕೋಶಾಧಿಕಾರಿ ರಮೇಶ್ ಎಂ. ಹೆಗ್ಡೆ, ಜತೆ ಕಾರ್ಯದರ್ಶಿ ರವಿ ಹೆಗ್ಡೆ ಹೆರ್ಮುಂಡೆ, ಜತೆ ಕೋಶಾಧಿಕಾರಿ ಚಂದ್ರಶೇಖರ್ ಹೆಗ್ಡೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ಸದಸ್ಯೆಯರು, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದು, ಯಕ್ಷಗಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.