Advertisement

ಪಾದದ ಬಿರುಕಿಗೆ ಮುಕ್ತಿ

09:35 PM Dec 09, 2019 | mahesh |

ಚಳಿಗಾಲದಲ್ಲಿ ಕಾಲಿನ ಹಿಮ್ಮಡಿಯಲ್ಲಿ ಬಿರುಕು ಕಾಣಿಸಿಕೊಳ್ಳುವುದು ಸಹಜ. ಕಾಲಿನ ಸೌಂದರ್ಯಕ್ಕೆ ಇದು ಕಪ್ಪು ಚುಕ್ಕೆ. ಜತೆಗೆ ಇದು ನೋವೂ ನೀಡುತ್ತದೆ. ಕೆಲವೊಂದು ಚರ್ಮಗಳಿಗೆ ಸಾಮಾನ್ಯವಾಗಿ ಈ ಸಮಸ್ಯೆ ಹುಟ್ಟಿನಿಂದಲೇ ಇರುತ್ತದೆ. ಚಳಿಗಾಲದಲ್ಲಿ ಬರುವ ಸಮಸ್ಯೆಗೆ ಮನೆಯಲ್ಲಿಯೇ ಸುಲಭ ಪರಿಹಾರ ಕಂಡುಕೊಳ್ಳಬಹುದು.

Advertisement

ಕಾಲಿನ ಹಿಮ್ಮಡಿಯಲ್ಲಿ ಬಿರುಕಿಗೆ ಹಲವು ಕಾರಣಗಳಿರುತ್ತದೆ. ಸಾಮಾನ್ಯವಾಗಿ ಕಾಲಿನ ಬಿರುಕು ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಇದರಿಂದ ಕಾಳಿನ ಸಿಪ್ಪೆ ಏಳುವುದರಿಂದ ಕಾಲಿನ ಸೌಂದರ್ಯವೂ ಹಾಳಾಗುತ್ತದೆ.

1 ವ್ಯಾಸ್‌ಲಿನ್‌ ಮತ್ತು ಲಿಂಬೆ
ವ್ಯಾಸ್‌ಲಿನ್‌ ಮತ್ತು ಲಿಂಬೆಯನ್ನು ಕಾಲಿಗೆ ಹಚ್ಚುವುದರಿಂದ ಕಾಲಿನ ಬಿರುಕು ಕಡಿಮೆಯಾಗುತ್ತದೆ. ಪ್ರತಿದಿನ ಕಾಲಿಗೆ ವ್ಯಾಸ್‌ಲಿನ್‌ ಹಚ್ಚುವುದರಿಂದ ಕಾಲಿನ ಬಿರುಕು ಕಡಿಮೆಯಾಗುತ್ತದೆ.

2 ಜೇನು ತುಪ್ಪ
ಜೇನು ತುಪ್ಪವನ್ನು ನಿಯಮಿತವಾಗಿ ಹಚ್ಚುವುದರಿಂದ ಪಾದದ ಬಿರುಕು ನಿಧಾನವಾಗಿ ಕಡಿಮೆಯಾಗುತ್ತದೆ.

3 ವೈಟ್‌ ವಿನಗರ್‌ ಮತ್ತು ಲೈಸನೆರ್‌
ಬಿಸಿ ನೀರಿಗೆ ವಿನಗರ್‌, ಲೈಸನೆರ್‌ ಹಾಕಿ ಕಾಲನ್ನು ಅದರಲ್ಲಿ ಸ್ವಲ್ಪ ಮುಳುಗಿಸಿಟ್ಟರೆ ಬಿರುಕು ಇರುವ ಕಾಲು ಸ್ವಚ್ಛವಾಗುತ್ತದೆ.

Advertisement

4 ವೆಜಿಟೇಬಲ್‌ ಆಯಿಲ್‌
ಕಾಲಿಗೆ ವೆಜಿಟೇಬಲ್‌ ಆಯಿಲ್‌ ಹಚ್ಚಿ ಒಂದು ರಾತ್ರಿಯಿಡಿ ಹಾಗೆ ಬಿಟ್ಟರೆ ನಿಧಾನಕ್ಕೆ ಕಾಲಿನ ಬಿರುಕು ಕಡಿಮೆಯಾಗುತ್ತದೆ.

5 ಓಟ್‌ಮೀಲ್‌ ಮತ್ತು ಆಲಿವ್‌ ಎಣ್ಣೆ
ಓಟ್‌ಮೀಲ್‌ ಮತ್ತು ಆಲಿವ್‌ ಎಣ್ಣೆಗೆ ಕಾಲಿನ ಬಿರುಕು ಕಡಿಮೆಗೊಳಿಸುವ ಶಕ್ತಿಯಿದೆ. ಓಟ್ಸ್‌ ಅನ್ನು ಪೇಸ್ಟ್‌ ಮಾದರಿಯಲ್ಲಿ ಮಾಡಿ ಕಾಲಿಗೆ ಹಚ್ಚಿದರೆ ಬಿರುಕು ಕಡಿಮೆಯಾಗುತ್ತದೆ. ಆಲಿವ್‌ ಆಯಿಲ್‌ ಅನ್ನು ಹಚ್ಚಿ 30 ನಿಮಿಷಗಳ ಕಾಲ ಹಾಗೇ ಬಿಡಬೇಕು.

6 ಎಳ್ಳೆಣ್ಣೆ
ಎಳ್ಳೆಣ್ಣೆಯನ್ನು ಹಚ್ಚಿದರೆ ಬಿರುಕು ಕಡಿಮೆಯಾಗುತ್ತದೆ. ರಾತ್ರಿ ಮಲಗುವಾಗ ಒಡೆದ ಕಾಲಿನ ಭಾಗಕ್ಕೆ ಸ್ವಲ್ಪ ಎಳ್ಳೆಣ್ಣೆ ಹಚ್ಚಬೇಕು. ಕ್ರಮೇಣ ಹಿಮ್ಮಡಿ ಸುಂದರವಾಗಿ ಕಾಣುತ್ತದೆ.

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next