Advertisement

ಯೋಧನ ಸ್ಮಾರಕ ನಿರ್ಮಾಣಕ್ಕೆ ಹೆಬ್ಟಾಳ ಗ್ರಾಮಸ್ಥರ ಪಟ್ಟು

10:53 AM Aug 17, 2019 | Suhan S |

ಶಿರಹಟ್ಟಿ: ತಾಲೂಕಿನ ಹೆಬ್ಟಾಳ ಗ್ರಾಮದ ಜನರೆಲ್ಲ ಸೇರಿ ಗ್ರಾಮ ಪಂಚಯತ್‌ ಕಾರ್ಯವೈಖರಿ ಖಂಡಿಸಿ ಸ್ವತಂತ್ರ ದಿನಾಚರಣೆ ದಿನದಂದು ಪಂಚಾಯತ್‌ ಕಾರ್ಯಾಲಯಕ್ಕೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕಳೆದ ವರ್ಷ ಗ್ರಾಮದ ಸಿಆರ್‌ಪಿಎಫ್‌ ಯೋಧ ಬಸನಗೌಡಾ ಪಾಟೀಲ್ ವೀರ ಮರಣ ಹೊಂದಿದ್ದು, ಈಡೀ ಗ್ರಾಮವೆ ಶೋಕ ಸಾಗರದಲ್ಲಿ ಮುಳುಗಿತ್ತು. ಆಗ ಜನಪ್ರತಿನಿಧಿಗಳು ವೀರಯೋಧನ ನೆನಪಿಗಾಗಿ ಸ್ಮಾರಕ ನಿರ್ಮಿಸುವುದಾಗಿ ಹೇಳಿದ್ದರು. ಆದರೆ ನಂತರದ ದಿನಗಳಲ್ಲಿ ಸ್ಮಾರಕ ನಿರ್ಮಾಣದ ಕೂರಿತು ಯಾವುದೇ ಕಾಮಗಾರಿ ಕಾರ್ಯಾರಂಭವಾಗದ ಕಾರಣ ಸಾರ್ವಜನಿಕರೆಲ್ಲ ಸೇರಿ ಪಂಚಾಯತ್‌ ಕಾಯಾಲಯಕ್ಕೆ ಬೀಗ ಹಾಕಿದರು.

ಪಂಚಾಯತಿ ಪಕ್ಕದ ಜಾಗದಲ್ಲಿಯೇ ವೀರಯೋಧ ಬಸನಗೌಡಾ ಪಾಟೀಲ್ ಅವರನ್ನು ಸಮಾಧಿ ಮಾಡಲಾಗಿದ್ದು, ಸ್ಮಾರಕ ನಿರ್ಮಿಸುವುದಿರಲಿ ಆ ಜಾಗವನ್ನು ಸ್ವಚ್ಛವಾಗಿ ಇಟ್ಟಿಲ್ಲ. ಸ್ವಾತಂತ್ರ್ಯೋತ್ಸವ ದಿನವೂ ಮಳೆ ನೀರು ಸಮಾಧಿ ಸುತ್ತ ನಿಂತಿದೆ. ಇದರ ಪರಿಣಾಮ ಅದರತ್ತ ಜನರಿಗೆ ಹೋಗಲು ಆಗುತ್ತಿಲ್ಲ ಆಂದು ಅಸಮಾಧನಾ ವ್ಯಕ್ತಪಡಿಸಿದರು. ನಂತರ ಗ್ರಾಮಸ್ಥರೇ ಸೇರಿ ವೀರಯೋಧನ ಸಮಾಧಿ ಸುತ್ತ ನಿಂತಿರುವ ನೀರಿನ ಮೇಲೆ ಮಣ್ಣು ಹಾಕಿದರು. ನಂತರ ಗ್ರಾಮದ ಯುವಕರೆಲ್ಲ ಸೇರಿ ವೀರಯೋಧನಿಗೆ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next