Advertisement
ವಿವರ: ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಮಂಗಳವಾರ ಮಧ್ಯಾಹ್ನ ಒಂದು ಗಂಟೆಯ ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಗದ್ದೆಗೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಅಜ್ಜಿಯ ಜತೆ ಇದ್ದ ಇಬ್ಬರು ಮೊಮ್ಮಕ್ಕಳಲ್ಲಿ 5 ವರ್ಷದ ಹಿರಿಯ ಮೊಮ್ಮಗ ಮನೆ ಹತ್ತಿರ ಬರುತ್ತಿದ್ದಂತೆ ಹಳ್ಳದ ದಡದ ದಾರಿಯಲ್ಲಿ ಓಡಲಾರಂಭಿಸಿದ. ಅದನ್ನು ನೋಡಿದ ಆತನ ತಂಗಿ ಕೃತಿಕಾ ಕೂಡ ಅಜ್ಜಿಯ ಕೈ ಬಿಡಿಸಿ ಓಡಲಾರಂಭಿಸಿದಳು. ಅಜ್ಜಿ ನಿಲ್ಲುವಂತೆ ಸೂಚಿಸಿದರೂ ಕೇಳದೆ ಓಡಿದ ಕೆಲವೇ ಸಮಯದಲ್ಲಿ ಆಕೆ ಕಾಲು ಜಾರಿ ನೀರಿಗೆ ಬಿದ್ದಳು. ಮಗುವಿನ ರಕ್ಷಣೆಗಾಗಿ ಅಜ್ಜಿ ಕೂಡ ಕೂಡಲೇ ಹಳ್ಳಕ್ಕೆ ಹಾರಿದರು. ಮೊಮ್ಮಗಳನ್ನು ಹಿಡಿದು ಮೇಲೆ ಬರುವ ಯತ್ನ ಮಾಡುವಷ್ಟರಲ್ಲಿ ಮಗು ಕೈ ಜಾರಿತು. ಆಳ ಇದ್ದುದರಿಂದ ಅಜ್ಜಿ ಕೂಡ ಈಜಲು ಸಾಧ್ಯವಾಗದೆ ಮುಳುಗಲಾರಂಭಿಸಿದರು. ಅಷ್ಟರಲ್ಲಿ ವಾಪಸ್ ಬಂದಿದ್ದ ಮೊಮ್ಮಗ ಬೊಬ್ಬೆ ಹಾಕಿ ಸ್ಥಳೀಯರನ್ನು ಕರೆದ. ಅವರು ಬಂದು ಅಜ್ಜಿಯನ್ನು ರಕ್ಷಿಸಿದರೂ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆಯ ವೇಳೆ ಮಕ್ಕಳ ಅಪ್ಪ-ಅಮ್ಮ ಮನೆಯಲ್ಲಿರಲಿಲ್ಲ. ತಾಯಿ ಬೀಜದ ಕಂಪೆನಿಯ ಕೆಲಸಕ್ಕೆ ಮತ್ತು ಅಪ್ಪ ಕೂಲಿ ಕೆಲಸಕ್ಕೆ ತೆರಳಿದ್ದರು. ಹಳ್ಳ ಸುಮಾರು 10 ಅಡಿ ಆಳವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಕಜ್ಕೆ: ಹಳ್ಳಕ್ಕೆ ಬಿದ್ದ ಮಗು ಸಾವು
10:25 AM Aug 03, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.