Advertisement
ಹೆಚ್ಚುತ್ತಿರುವ ತಾಪಮಾನಹೆಬ್ರಿ ವಲಯ ವನ್ಯಜೀವಿ ವಿಭಾಗದ ಪ್ರಭಾರ ವಲಯ ಅರಣ್ಯಾಧಿಕಾರಿ ಶ್ರುತಿ ಮಾತನಾಡಿ ಬೇಸಗೆಯಲ್ಲಿ ಬಿಸಿಲು ತಾಪ ಹೆಚ್ಚಾಗುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಎಲ್ಲೆಡೆ ಕಂಡುಬರುತ್ತಿದೆ. ಮಾನವರು ಈ ಸಮಸ್ಯೆ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಮೂಕ ಪ್ರಾಣಿ ಪಕ್ಷಿಗಳ ಸ್ಥಿತಿ ಯಾರಿಗೂ ತಿಳಿಯುವುದಿಲ್ಲ. ಹಲವು ಪಕ್ಷಿಗಳು ನೀರಿನ ಕೊರತೆಯಿಂದ ಪ್ರಾಣ ಕಳೆದುಕೊಳ್ಳುತ್ತವೆ. ಈಗ ಪ್ರತಿಯೊಬ್ಬರೂ ಜಾಗೃತರಾಗಿ ತಮ್ಮ ಮನೆಯ ವಠಾರದಲ್ಲಿ ನೀರನ್ನು ಇಡುವುದರ ಮೂಲಕ ನಾಶ ವಾಗುತ್ತಿರುವ ಪಕ್ಷಿಸಂಕುಲವನ್ನು ರಕ್ಷಿಸಬಹುದು ಎಂದರು.
ಮಕ್ಕಳು ರಜೆಯಲ್ಲಿ ಕಾಲಹರಣ ಮಾಡುವ ಬದಲು ಇಂತಹ ಕಾರ್ಯಾಗಾರದಲ್ಲಿ ಪಾಲ್ಗೊಂಡು ತಾವು ಜಾಗೃತಗೊಳ್ಳುವುದರೊಂದಿಗೆ ಇತತರಲ್ಲೂ ಪಕ್ಷಿ ಸಂಕುಲ ಉಳಿಸಲು ಜಾಗೃತಿ ಮೂಡಿಸುತ್ತಿರುವ ಚಾಣಕ್ಯ ಸಂಸ್ಥೆಯ ಸಾಮಾಜಿಕ ಕಾಳಜಿ ಶ್ಲಾಘನೀಯ ಎಂದು ಟಿ.ಜಿ.ಆಚಾರ್ಯ ಹೇಳಿದರು. ಹೆಬ್ರಿ ಜೇಸಿರೆಟ್‌ನ ಅಧ್ಯಕ್ಷೆ ಸೋನಿ ಪಿ. ಶೆಟ್ಟಿ, ಹೆಬ್ರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ತುಳಸಿ, ಪತ್ರಕರ್ತ ಶ್ರೀದತ್ತ ಶೆಟ್ಟಿ, ಸುಜಾತಾ ಹರೀಶ್,ಉದಯಶೆಟ್ಟಿ ಮುಟ್ಲಪಾಡಿ, ಮಲ್ಲಿಕಾ, ಪೂರ್ಣಿಮಾ ಮೊದಲಾದವರಿದ್ದರು.
Related Articles
Advertisement
ಹಕ್ಕಿಗಳಿಗೆ ಕಾಳು ನೀರುಪಕ್ಷಿ ಸಂಕುಲ ಉಳಿಸಿ, ಪಕ್ಷಿಗಳಿಗೆ ಕಾಳು ನೀರು ನೀಡಿ ಪರಿಸರ ರಕ್ಷಿಸಿ ಮೊದಲಾದ ಘೋಷಣೆ ಕೂಗುತ್ತಾ ಬೇಸಗೆ ಶಿಬಿರದ ಸುಮಾರು 35ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮನೆ ಹಾಗೂ ನಗರದ ಪ್ರಮುಖ ಬೀದಿಯಲ್ಲಿ ತಿರುಗಿ, ಒಂದರಲ್ಲಿ ನೀರು ಇನ್ನೊಂದರಲ್ಲಿ ಅನ್ನವನ್ನು ಹಾಕಿ ಇಡಲು ಅನುಕೂಲವಾಗುವಂತೆ ತೆಂಗಿನ ಗರಟೆಯನ್ನು ಮನೆಗಳಿಗೆ ನೀಡಿ ಗಮನ ಸೆಳೆದರು.