Advertisement

ತಾತ್ಕಾಲಿಕ ಕಟ್ಟಡದಲ್ಲಿ ಮೂಲಸೌಕರ್ಯವಿಲ್ಲ

06:00 AM Aug 11, 2018 | Team Udayavani |

ಹೆಬ್ರಿ: ನೂತವಾಗಿ ರಚನೆ ಗೊಂಡ ಹೆಬ್ರಿ ತಾಲೂಕು ಕಚೇರಿ ಇದುವರೆಗೆ ಬೋರ್ಡಿಗೆ ಮಾತ್ರ ಸೀಮಿತ ವಾಗಿದ್ದು ಈಗ ಪಾರ್ಕಿಂಗ್‌ ತಾಣವಾಗಿ ಮಾರ್ಪಟ್ಟಿದೆ. ಕಚೇರಿಯ ಅವರಣದ ಪ್ರವೇಶದ್ವಾರದ ಎದರು ಗೇಟು ಇಲ್ಲದೆ ಇರುವುದರಿಂದ ಸಾರ್ವಜನಿಕರು ತಮ್ಮ ವಾಹನವನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಈ ಬಗ್ಗೆ ಇಲಾಖೆ ಕೂಡ ಮೌನವಹಿಸಿದೆ. ಇದರೊಂದಿಗೆ ತಾಲೂಕು ಕಚೇರಿಯಲ್ಲಿ ಮೂಲಸೌಕರ್ಯ, ಸಾರ್ವಜನಿಕ ಕೆಲಸ ಗಳಿಲ್ಲದೆ ನಾಮ್‌ಕೆವಾಸ್ತೆ ಎಂಬಂತಿದೆ. 

Advertisement

ತಾತ್ಕಾಲಿಕ ಕಟ್ಟಡ ಸೋರುತ್ತಿದೆ
ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಹಳೆ  ಕಟ್ಟಡದಲ್ಲಿ ತಾತ್ಕಲಿಕವಾಗಿ ತಾಲೂಕು ಕಚೇರಿಯನ್ನು  ಆರಂಭಿಸಿದ್ದು ಯಾವಾಗಲೂ ಬಾಗಿಲು ಹಾಕಿರುತ್ತಿತ್ತು. ಈಗ ಡಿ ಗ್ರೂಪ್‌ ನೌಕರರ ನೇಮಕವಾಗಿ ಕಚೇರಿ ತೆರೆದಿದ್ದರೂ ಯಾವುದೇ ಸೇವೆಗಳು ಲಭ್ಯವಿಲ್ಲ. ಹಳೆ ಕಟ್ಟಡವಾದ್ದರಿಂದ ಮಳೆಗಾಲದಲ್ಲಿ ಸೋರುತ್ತಿದೆ. 
 
ಹೆಬ್ರಿ ತಾಲೂಕಿಗೆ ಉಪ ತಹಶೀಲ್ದಾರ್‌ ಅವರನ್ನು ನೇಮಿಸಿದ್ದರೂ, ಹಳೆಯ ಕಟ್ಟಡದಲ್ಲಿ ಕಂಪ್ಯೂಟರ್‌ ಇತ್ಯಾದಿ ಮೂಲ ಸೌಕರ್ಯ ಇಲ್ಲದ್ದರಿಂದ  ಕಾರ್ಕಳ ತಾ| ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೋಬಳಿ ವಿಂಗಡನೆಯಲ್ಲಿ ಗೊಂದಲ
ಇದೀಗ ಅಜೆಕಾರು ಹೋಬಳಿಯ ಬದಲು ಹೆಬ್ರಿ ಹೋಬಳಿ ರಚನೆಯಾದಲ್ಲಿ ಅಜೆಕಾರು ಹೋಬಳಿ ವ್ಯಾಪ್ತಿಯಲ್ಲಿ ಬರುವ ಸುಮಾರು 11ಗ್ರಾಮಗಳು  ಕಾರ್ಕಳ ಅಥವಾ ಹೆಬ್ರಿಗೆ ಸೆರ್ಪಡೆ ಯಾಗ ಬೇಕಾಗುತ್ತದೆ. ಆಗ ತಾಲೂಕು ಕಾರ್ಕಳ ಹೋಬಳಿ ಹೆಬ್ರಿ ಆಗುವ ಗೊಂದಲವಿದೆ.  

ಕಚೇರಿಗೆ ಸ್ಥಳ ಪರಿಶೀಲನೆ
ಎಲ್ಲಾ ಇಲಾಖಾ ಕಚೇರಿಗಳು ಒಂದೇ ಕಟ್ಟಡದಲ್ಲಿರುವಂತೆ ತಾಲೂಕು ಕಚೇರಿಗೆ ಕಾದಿರಿಸಿದ ನಾಲ್ಕು ಪ್ರದೇಶ‌ವನ್ನು ಕಂದಾಯ ಅಧಿಕಾರಿಗಳು ಪರಿಶೀಲನೆ  ಮಾಡಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.

 ಗೇಟ್‌ ಇಲ್ಲದಿರುವುದು ಕಾರಣ 
ಪಂಚಾಯತ್‌ನಿಂದ  ನಿರ್ಮಾಸಿದ ಉಚಿತ ಪಾರ್ಕಿಂಗ್‌  ವ್ಯವಸ್ಥೆಯಲ್ಲಿ ಜನರಿಗೆ ವಾಹನ ನಿಲ್ಲಿಸಲು ತಿಳಿಸಲಾಗಿದ್ದು ಜನರು ತಾಲೂಕು ಕಚೇರಿ ಅವರಣದ ಒಳಗೆ ಕೂಡ ಇಡುತ್ತಿದ್ದಾರೆ.ಈ ಬಗ್ಗೆ ತಾಲೂಕು ಆವರಣಕ್ಕೆ ಗೇಟ್‌ ಇಲ್ಲದಿರುವುದು ಕಾರಣವಾಗಿದ್ದು ಇಲಾಖೆ ಗೇಟ್‌ ನಿರ್ಮಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಸಮಸ್ಯೆ ಪರಿಹಾರ ವಾಗುತ್ತದೆ.

– ಸುಧಾಕರ ಹೆಗ್ಡೆ
ಅಧ್ಯಕ್ಷರು, ಗ್ರಾ.ಪಂ. ಹೆಬ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next