Advertisement

ಇಂದು  ಹೆಬ್ರಿ ತಾ|ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

12:30 AM Feb 22, 2019 | |

ಹೆಬ್ರಿ: ನೂತನ ಹೆಬ್ರಿ ತಾಲೂಕಿನ ಪ್ರಥಮ ತಾ| ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದಿಂದ ಸಜ್ಜಾಗಿದೆ.  
ಉಡುಪಿ ಸಾಹಿತ್ಯ ಪರಿಷತ್ತು ಹೆಬ್ರಿ ತಾ| ಘಟಕದ ಆಶ್ರಯದಲ್ಲಿ ಫೆ.22ರಂದು ಹೆಬ್ರಿ ಶ್ರೀ ಅನಂತ ಪದ್ಮನಾಭ ಸನ್ನಿಧಿ 
ಸಭಾಭವನದ ಸೀತಾನದಿ ಗಣಪಯ್ಯ ಶೆಟ್ಟಿ  ವೇದಿಕೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ.ಸಿ.
ರಾವ್‌ ಶಿವಪುರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಹೆಬ್ರಿ ತಾ| ಪ್ರಥಮ ಸಾಹಿತ್ಯ ಸಮ್ಮೇಳನ -2019 ನಡೆಯಲಿದೆ. 

Advertisement

ಬೆಳಗ್ಗೆ 8.30 ಕ್ಕೆ ರಾಷ್ಟ್ರ ಧ್ವಜಾರೋಹಣದೊಂದಿಗೆ ಆರಂಭಗೊಂಡು ಹೆಬ್ರಿಯ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಿಂದ ಆಕರ್ಷಕ ಮೆರವಣಿಗೆ ಮೂಲಕ ಬಂದು ಬಳಿಕ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ.  ಇದೇ ಸಂದರ್ಭದಲ್ಲಿ ಪುಸ್ತಕ  ಮಳಿಗೆ ಉದ್ಘಾಟನೆ, ಪುಸ್ತಕ ಬಿಡುಗಡೆ, ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ  ಸಮಾರೋಪ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.

ಅಧ್ಯಕ್ಷರ  ಪರಿಚಯ 
ಶಿವಪುರ ಪಠೇಲ್‌ ಬಿ. ಸದಾಶಿವ ರಾವ್‌ ಮತ್ತು ಸರಸ್ವತಿ ರಾವ್‌ ಅವರ ಪುತ್ರರಾದ ಹರಿದಾಸ ಬಡಿRಲಾಯ ಚಂದ್ರ ಶೇಖರ ರಾವ್‌ ಅವರು ಮೈಸೂರು ವಿಶ್ವವಿದ್ಯಾನಿಲಯ ದಿಂದ ಎಂ.ಎ. ಸ್ನಾತಕೋತ್ತರ ಪದವಿ ಪಡೆದು ಮುಖ್ಯ ಶಿಕ್ಷಕರಾಗಿ ಹಲವು ಶಾಲೆಗಳಲ್ಲಿ   ಸೇವೆ ಸಲ್ಲಿಸಿದ್ದಾರೆ. ಕಾರ್ಕಳ ತಾ| ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾಗಿ , ಉದಯವಾಣಿಯ ಪತ್ರಕರ್ತರಾಗಿ, ಜೇಸಿಐ ರಾಷ್ಟ್ರೀಯ ತರಬೇತಿದಾರರಾಗಿದ್ದ ಇವರು ಇತರ ಪತ್ರಿಕೆ, ಪುಸ್ತಕಗಳಲ್ಲಿ ಅಂಕಣಕಾರರಾಗಿ ಮಾನವೀಯ ಮೌಲ್ಯಗಳ ಲೇಖನ ವಿಶೇಷ ಜನಪ್ರಿಯತೆ ಕಂಡಿತ್ತು. 5,000ಕ್ಕೂ  ಮಿಕ್ಕಿ ಹರಿಕಥೆ ನಡೆಸಿ ಹರಿದಾಸರಾಗಿ ಪ್ರಸಿದ್ದರಾಗಿದ್ದಾರೆ. 

ಸಿರಿಗನ್ನಡಂ ಗಲ್ಲಿ ಗಲ್ಲಿಗೆ
ಕನ್ನಡ ಉಳಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯ.ಕನ್ನಡ ಮಾತೆ ಮನಸ್ಸು ಮಾಡಿದಾಗ ಜನರೆಲ್ಲ ಎಚ್ಚರಗೊಳ್ಳಲೇ ಬೇಕಾಗುತ್ತದೆ. ಇತ್ತೀಚೆಗಂತೂ ಗಲ್ಲಿ ಗಲ್ಲಿಗಳಲ್ಲಿ  ಕನ್ನಡದ ಕೆಲಸಗಳು ನಡೆಯುತ್ತಿವೆ.ಇದು ಸುದ್ದಿಯಾಗುವುದಿಲ್ಲ. ಸದ್ದಿಲ್ಲದೆ ಸುದ್ದಿಯಾಗದೇ ಸಮೃದ್ಧಿಯಾಗುವುದೇ ಕನ್ನಡ ಮಾತೆಯ ಲಕ್ಷಣ .ಬಂಧುಗಳೇ ಕನ್ನಡ- ನಾಡು- ನುಡಿ- ನೆಲ- ಜಲ-ಗಾಳಿ ಎಲ್ಲವನ್ನೂ ಕಾಪಾಡುವಲ್ಲಿ ನಾವು ಸಂಕಲ್ಪ ಮಾಡೋಣ. ಸಿರಿಗನ್ನಡಂ ಗೆಲ್ಗೆ ,ಸಿರಿಗನ್ನಡಂ ಬಾಳ್ಗೆ ,ಸಿರಿಗನ್ನಡಂ ಗಲ್ಲಿ ಗಲ್ಲಿಗೆ.
– ಹರಿದಾಸ ಬಿ.ಸಿ.ರಾವ್‌ ಶಿವಪುರ,ಸಮ್ಮೇಳನಾಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next