Advertisement

Hebri ಎಸ್‌ .ಆರ್‌. ಶಿಕ್ಷಣ ಸಂಸ್ಥೆಯ ರಜತ ಸಂಭ್ರಮ; ಇ-ಲೈಬ್ರರಿ, ಆಡಳಿತ ಕಚೇರಿ ಉದ್ಘಾಟನೆ

11:20 PM Jan 13, 2024 | Team Udayavani |

ಹೆಬ್ರಿ: ಇಲ್ಲಿನ ಎಸ್‌.ಆರ್‌. ಶಿಕ್ಷಣ ಸಂಸ್ಥೆ 25 ವರ್ಷ ಪೂರೈಸಿ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ರಾಜ್ಯದ ಗಮನ ಸೆಳೆದಿರುವುದು ಶ್ಲಾಘನೀಯ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.

Advertisement

ಅವರು ಶನಿವಾರ ಹೆಬ್ರಿಯ ಎಸ್‌.ಆರ್‌. ಸಮೂಹ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ನೂತನ ಆಡಳಿತ ಕಚೇರಿಯನ್ನು ಉದ್ಘಾಟಿಸಿ ಸಂಸ್ಥೆಯ ವತಿಯಿಂದ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಚ್‌. ನಾಗರಾಜ್‌ ಶೆಟ್ಟಿ ಮಾತನಾಡಿ, ಸಾಧಕ ವಿದ್ಯಾರ್ಥಿಗಳು ಹಾಗೂ ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕೆ ಈಗಾಗಲೇ 2 ಕೋಟಿ ರೂ.ಗಳನ್ನು ಸಂಸ್ಥೆಯಿಂದ ಭರಿಸಲಾಗಿದೆ. 25 ವರ್ಷಗಳಿಂದ ಗುಣಮಟ್ಟದ ಶಿಕ್ಷಣದೊಂದಿಗೆ ಶೇ. 100 ಫಲಿತಾಂಶ ಪಡೆಯುತ್ತಾ ರಾಜ್ಯದಲ್ಲಿಯೇ ಎಸ್‌.ಆರ್‌. ಸಂಸ್ಥೆಯನ್ನು ಗುರುತಿಸುವಂತೆ ಮಾಡಿದ ಶಿಕ್ಷಕರಿಗೆ, ಪೋಷಕರಿಗೆ ಹಾಗೂ ಸಂಸ್ಥೆಯ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

“ಬೃಂದಾವನ’ ಬಿಡುಗಡೆ
ರಜತ ಸಂಭ್ರಮದ ಸ್ಮರಣ ಸಂಚಿಕೆ “ಬೃಂದಾವನ’ವನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಸಾಧಕ ವಿದ್ಯಾರ್ಥಿ ಡಾ| ಚೇತನ್‌ ಹೆಬ್ಬಾರ್‌ ಸೇರಿದಂತೆ ಎಸ್‌.ಆರ್‌. ಪ.ಪೂ. ಕಾಲೇಜಿನ ನೀಟ್‌ ಸಾಧಕರಿಗೆ, ರಾಜ್ಯ ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.

ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ಎಲ್‌. ಭೋಜೇಗೌಡ, ಮಂಜುನಾಥ ಭಂಡಾರಿ, ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಆರ್‌. ಮಂಜುನಾಥ್‌ ಗೌಡ, ಉಡುಪಿಯ ಚಾರ್ಟರ್ಡ್‌ ಅಕೌಂಟೆಂಟ್‌ ಗಣೇಶ್‌ ಹೆಬ್ಟಾರ್‌, ಪ್ರಕಾಶಿನಿ ಜಿ.ಭಂಡಾರಿ,ಟ್ರಸ್ಟಿ ಡಾ.ಯತಿರಾಜ್‌ ಶೆಟ್ಟಿ,ಸಂಸ್ಥೆಯ ಪ್ರಾಂಶುಪಾಲರಾದ ಪ್ರಶಾಂತ್‌, ಗೋಪಾಲ ಆಚಾರ್ಯ, ಹೇರಾಲ್ಡ್‌ ಲೂಯಿಸ್‌ ಉಪಸ್ಥಿತರಿದ್ದರು.

Advertisement

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠ್ಠಲ ಶೆಟ್ಟಿ ಅನಿಸಿಕೆ ವ್ಯಕ್ತ ಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್‌. ಶೆಟ್ಟಿ ಸ್ವಾಗತಿಸಿ, ಪ್ರಾಂಶುಪಾಲೆ ಭಗವತಿ ವಂದಿಸಿದರು. ಉಪನ್ಯಾಸಕಿ ನಿಶಿತಾ ನಿರ್ವಹಿಸಿದರು.

ಶಿಕ್ಷಣವೇ ಆಸ್ತಿ: ಮಧು
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಸ್ಥೆ ಹವಾನಿಯಂತ್ರಿತ ಇ-ಲೈಬ್ರರಿ ಉದ್ಘಾಟಿಸಿ ಸಮ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಎನ್ನುವುದು ಮಕ್ಕಳ ಬದುಕಿನ ಆಸ್ತಿ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಮೊದಲ ಆದ್ಯತೆಯಾಗಿದ್ದು ಪಬ್ಲಿಕ್‌ ಸ್ಕೂಲ್‌ ಸಂಖ್ಯೆ ಹೆಚ್ಚು ಮಾಡಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಎಸ್‌.ಆರ್‌. ಸಂಸ್ಥೆಯ ಸಾಧನೆ ಮಾದರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next