ಹೆಬ್ರಿ: ಸಂಘದ ಸದಸ್ಯರು ಒಗ್ಗಟ್ಟಿನಿಂದ ತಮ್ಮ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು. ಸಂಘದ ಸದಸ್ಯರು ಎಲ್ಲರೂ ಗುರುತು ಚೀಟಿ ಹೊಂದಿ ಸಾಮರಸ್ಯದಿಂದಿರಬೇಕು ಎಂದು ಹೆಬ್ರಿ ಅನಂತ ಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ಲಕ್ಷ್ಮೀ ನಾರಾಯಣ ನಾಯಕ್ ಹೇಳಿದರು.
ಅವರು ಜು. 30ರಂದು ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ನಡೆದ ಅನಂತಪದ್ಮನಾಭ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಸಮಾವೇಶದಲ್ಲಿ ಭಾಗ ವಹಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಸುಧಾಕರ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ 4ನೇ ಭಾರಿ ಆಯ್ಕೆಯಾದ ಪ್ರಭಾಕರ ಪೂಜಾರಿ ,ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ಭರತ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಎಚ್., ಕೋಶಾಧಿಕಾರಿ ಗೋಕುಲ್ ಆಚಾರ್ಯ, ಉಪಾಧ್ಯಕ್ಷ ಕೆ.ಪುತ್ರನ್, ಹೆಬ್ರಿ ಸುರೇಂದ್ರ ಪೂಜಾರಿ, ಚಾರ ಕೃಷ್ಣ ನಾಯ್ಕ, ಸೋಮೇಶ್ವರ ಜಯಕರ ಪೂಜಾರಿ, ಪ್ರಮುಖರಾದ ವಿಜಯ ಪೂಜಾರಿ ಕುಚ್ಚಾರು, ಅಶೋಕ್ ಶೆಟ್ಟಿ ಹೆಬ್ರಿ, ಮಂಜುನಾಥ ಪೂಜಾರಿ ಬಲ್ಲೆ, ಚಾರ ರಾಘವೇಂದ್ರ ನಾಯ್ಕ, ಕುಚ್ಚಾರು ಶ್ರೀಕಾಂತ ಪೂಜಾರಿ, ನಾಗೇಂದ್ರ ನಾಯ್ಕ ಬಚ್ಚಪ್ಪು, ಜಿಲ್ಲಾ ಯೂನಿಯನ್ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಪೂಜಾರಿ, ಜಯಕರ ಆಮ್ಲರ್, ಎಚ್. ರಮೇಶ್ ನಾಯ್ಕ, ದಿವಾಕರ ನಾಯ್ಕ ಬೀಡು, ನಿತ್ಯಾನಂದ ನಾಯ್ಕ ಚಾರ, ನಾಗರಾಜ ಶೆಟ್ಟಿಗಾರ ಬಚ್ಚಪ್ಪು ಉಪಸ್ಥಿತರಿದ್ದರು. ವಿಜಯ ಪೂಜಾರಿ ಸ್ವಾಗತಿಸಿ, ಎಚ್. ರಮೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿ ಕೆ. ಪುತ್ರನ್ ವಂದಿಸಿದರು.