Advertisement

Hebri ರಿಕ್ಷಾ-ಆ್ಯಂಬುಲೆನ್ಸ್‌ ಢಿಕ್ಕಿ; ಚಾಲಕರಿಗೆ ಗಾಯ

11:24 PM Jan 21, 2024 | Team Udayavani |

ಹೆಬ್ರಿ: ಹೆಬ್ರಿಯಿಂದ ಕುಚ್ಚೂರು ಕಡೆ ರಸ್ತೆ ಕ್ರಾಸ್‌ ಮಾಡಲು ಹೆಬ್ರಿ ಜಂಕ್ಷನ್‌ನಲ್ಲಿ ನಿಂತಿದ್ದ ರಿಕ್ಷಾಕ್ಕೆ ಆ್ಯಂಬುಲೆನ್ಸ್‌ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಚಾಲಕರಿಗೂ ಗಂಭೀರ ಗಾಯಗಳಾಗಿವೆ.

Advertisement

ಶನಿವಾರ ತಡರಾತ್ರಿ ಹೆಬ್ರಿಯಿಂದ ನಾಟಕ ನೋಡಿ ಮನೆಗೆ ಹೋಗುತ್ತಿದ್ದ ಅಟೋ ಚಾಲಕ ರಮೇಶ ತೀವ್ರ ಸ್ವರೂಪದ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ್ಯಂಬುಲೆನ್ಸ್‌ ಚಾಲಕ ಮಹಮ್ಮದ್‌ ರಫೀಕ್‌ ಅತಿ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಬಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಮತ್ತು ಆ್ಯಂಬುಲೆನ್ಸ್‌ ಪಲ್ಟಿಯಾಗಿದ್ದು, ಅದರಲ್ಲಿದ್ದ ಸಹ ಪ್ರಯಾಣಿಕ ಮಹಮ್ಮದ್‌ ಅಲಿ ಅವರಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next