Advertisement
ಬೇಳಂಜೆ ಹೊಸಮನೆ ನಿವಾಸಿ ರಾಜೇಶ ದರಲೆ ರಾಶಿಗೆ ಬೆಂಕಿ ಹಾಕುತ್ತಿರುವ ಬಗ್ಗೆ ದೂರಿನ ಮೇರೆಗೆ ವಿಚಾರಣೆಗೆ ತೆರಳಿದ ಹೆಬ್ರಿ ಠಾಣಾ ಹೆಡ್ ಕಾನ್ಸ್ಟೆಬಲ್ ರಶ್ಮಿ ಅವರಿಗೆ ರಾಜೇಶ್ ಏಕಾಏಕಿ ಅವಾಚ್ಯ ಶಬ್ದಗಳಿಂದ ಬೈದು, ಕಟ್ಟಿಗೆಯಿಂದ ರಶ್ಮಿ ಹಾಗೂ ಚಾಲಕ ಆನಂದ ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಹೆಬ್ರಿ ಬಡಾಗುಡ್ಡೆ ನಿವಾಸಿ ಉಷಾ (30) ಅವರು ಮಾನಸಿಕವಾಗಿ ನೊಂದು ಫೆ. 19ರಂದು ರಾತ್ರಿ ಮನೆಯ ಮಲಗುವ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.