Advertisement
ತಾಲೂಕು ಕಚೇರಿ ಕಟ್ಟಡದ ಸ್ಥಳವನ್ನು 1.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ತಂಗುದಾಣವಾಗಿ ಮಾಡಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಕೂಡ್ಲು ಪರಿಸರ ಅಂತರ್ಜಾಲ ಸಮಸ್ಯೆಯಿಂದಾಗಿ ಬಾಹ್ಯ ಸಂಪರ್ಕಕ್ಕೆ ಅಸಾಧ್ಯವಾಗಿತ್ತು. ಈ ಭಾಗದಲ್ಲಿ ಟವರ್ ನಿರ್ಮಾಣ ಕಷ್ಟ ಸಾಧ್ಯವಾದ್ದರಿಂದ ನಾಡ್ಪಾಲು ಗ್ರಾ.ಪಂ.ನ ವಿಶೇಷ ಮುತುವರ್ಜಿ ಯಲ್ಲಿ 23 ಕಿ.ಮೀ. ಉದ್ದಕ್ಕೆ ಫೈಬರ್ ಕೇಬಲ್ ಮೂಲಕ ಸಮಸ್ಯೆಗೆ ಮುಕ್ತಿ ಒದಗಿಸಲಾಗಿದೆ ಎಂದು ಮೇಗದ್ದೆ, ಕೂಡ್ಲು, ವಣಜಾರು ಪ್ರದೇಶದ ಅಂತರ್ಜಾಲ ಸೇವೆಯನ್ನು ಉದ್ಘಾಟಿಸಿ ಸಚಿವರು ಹೇಳಿದರು.
Related Articles
Advertisement
ಹೆಬ್ರಿ ತಹಶೀಲ್ದಾರ್ ಪುರಂದರ ಕೆ., ಹೆಬ್ರಿ ತಾ.ಪಂ. ಕಾ.ನಿ. ಅಧಿಕಾರಿ ಶಶಿಧರ್, ನಾಡ್ಪಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಹೆಗ್ಡೆ, ಉಪಾಧ್ಯಕ್ಷ ನವೀನ್ ಕುಮಾರ್, ಕೂಡ್ಲು ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಅಧಿಕಾರಿ ಗೌರವ್, ಅನಿಲ್ ಕುಮಾರ್, ರಘುರಾಮ್ ಶೆಟ್ಟಿ ಉಪಸ್ಥಿತರಿದ್ದರು.