Advertisement
ಈ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಕೇಂದ್ರ ಸರಕಾರ ಕಳೆದ ಡಿಸೆಂಬರ್‌ನಲ್ಲಿ ಘೋಷಿಸಿತ್ತು. ಹೆಬ್ರಿಯಿಂದ-ಪರ್ಕಳ ವರೆಗೆ ಮತ್ತು ಮಲ್ಪೆಯಿಂದ-ಕರಾವಳಿ ಜಂಕ್ಷನ್ ವರೆಗೆ ಎರಡು ವಿಭಾಗದಲ್ಲಿ ಕಾಮಗಾರಿ ನಡೆಯಲಿದ್ದು, 28.3 ಕಿ.ಮೀ. ಉದ್ದದ ರಸ್ತೆ ಇದಾಗಿದೆ. ಈಗಾಗಲೇ ಕುಂಜಿಬೆಟ್ಟು-ಪರ್ಕಳದ ವರೆಗೆ 400 ಮೀ. ಹೊರತುಪಡಿಸಿ 8 ಕಿ.ಮೀ. ಪೂರ್ಣಗೊಂಡಿದೆ. ಹಣಕಾಸು ಮಂಜೂರಾತಿಗೆ ವಿಳಂಬವಾದ ಕಾರಣ ಕಾಮಗಾರಿ ಆರಂಭವೂ ವಿಳಂಬವಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ.
ಹೆದ್ದಾರಿ ನಿರ್ಮಾಣ ಗುತ್ತಿಗೆ ಸಂಸ್ಥೆಯೊಂದು ಟೆಂಡರ್‌ನಲ್ಲಿ ಭಾಗವಹಿಸಿದ್ದು, 2 ಬಾರಿಯೂ ತಾಂತ್ರಿಕ ಸಮಸ್ಯೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಮತ್ತೆ ಟೆಂಡರ್ ಪ್ರಕ್ರಿಯೆಗೆ ಒಂದೆರಡು ತಿಂಗಳು ಸಮಯ ತೆಗೆದುಕೊಳ್ಳಬಹುದು ಈಗಾಗಲೇ ಟೆಂಡರ್ ಪ್ರಕ್ರಿಯೆ ಅವ್ಯವಸ್ಥೆಯಿಂದಾಗಿ 4 ತಿಂಗಳು ತಡವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಳ ಪರ್ಕಳ:
ಮತ್ತೆ ತಡೆಯಾಜ್ಞೆ
ಕೆೆಳ ಪರ್ಕಳದಲ್ಲಿ ತಿರುವು ರಸ್ತೆ ಇರುವುದನ್ನು ನೇರ ರಸ್ತೆಯಾಗಿ ರೂಪಿಸ ಲಾಗುತ್ತಿದ್ದು, ಈ ಕಾಮಗಾರಿ ನಡೆಯುತ್ತಿರುವ ಖಾಸಗಿ ಕಟ್ಟಡವಿರುವ ನಿರ್ದಿಷ್ಟ ಜಾಗದಲ್ಲಿ ಕಾಮಗಾರಿ ನಿರ್ವಹಿಸದಂತೆ ನ್ಯಾಯಾಲಯವು ಮತ್ತೆ ತಡೆಯಾಜ್ಞೆ ನೀಡಿದೆ. ಸೂಕ್ತ ಪರಿಹಾರ ವ್ಯವಸ್ಥೆಯನ್ನು ಮಾಡಿಲ್ಲ ಮತ್ತು ತ್ರೀಡಿ ನೋಟಿಫಿಕೇಶನ್ ಪ್ರಕ್ರಿಯೆ ವೇಳೆ ನೋಟಿಸ್ ನೀಡದೆ ಕಾಮಗಾರಿ ಕೈಗೆತ್ತಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಖಾಸಗಿ ಕಟ್ಟಡಕ್ಕೆ ಸಂಬಂಧ ಪಟ್ಟವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನ್ಯಾಯಾ ಲಯವು ಮುಂದಿನ ವಿಚಾರಣೆ ವರೆಗೆ ಖಾಸಗಿ ಕಟ್ಟಡ ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ಕಾಮಗಾರಿ ನಿರ್ವಹಿಸದಂತೆ ತಡೆಯಾಜ್ಞೆ ನೀಡಿದೆ. ಆ ಜಾಗವನ್ನು ಹೊರತು ಪಡಿಸಿ ಉಳಿದ ಜಾಗದಲ್ಲಿ 400 ಮೀಟರ್ ಉದ್ದದ ರಸ್ತೆ ಕಾಮಗಾರಿ, ಮಳೆ ನೀರು ಹರಿಯುವ ತೋಡಿನ ಕಾಮಗಾರಿ ಸಾಗುತ್ತಿದೆ.