Advertisement
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಭಯಾರಣ್ಯಗಳಲ್ಲಿ ತಾಲೂಕಿನ ವ್ಯಾಪ್ತಿಯ ಹೆಬ್ಬೆ ಅಭಯಾರಣ್ಯವೂ ಒಂದಾಗಿದ್ದು, ಅರಣ್ಯ ಹಾಗೂ ವನ್ಯಜೀವಿಗಳ ಸಂತತಿ ಅಳಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಈ ಅಭಯಾರಣ್ಯದಲ್ಲಿ ಆನೆ, ಹುಲಿ, ಜಿಂಕೆ ಮತ್ತಿತ್ತರ ಪ್ರಾಣಿ ಸಂಕುಲ ಮತ್ತು ಹರಿದ್ವರ್ಣ ಕಾಡು ಇಲ್ಲಿದೆ. ಇಂತಹ ಪ್ರಕೃತಿದತ್ತವಾದ ಪ್ರದೇಶದ ಮಧ್ಯದಲ್ಲಿರುವ ದೇವಸ್ಥಾನವೊಂದು ಎಲ್ಲರನ್ನು ಆಕರ್ಷಿಸುತ್ತದೆ.
Related Articles
Advertisement
ದೇವಸ್ಥಾನಕ್ಕೆ ಹೋಗುವ ದಾರಿ: ಈ ಐತಿಹಾಸಿಕ ಸ್ಥಳಕ್ಕೆ ಹೋಗಬೇಕಾದರೆ ಎನ್.ಆರ್.ಪುರದಿಂದ ಹಂತುವಾನಿ ಗ್ರಾಮದವರೆಗೆ ಬಸ್ ಸೌಕರ್ಯವಿದೆ. ಅಲ್ಲಿಂದ ಮೋರಿಮಠ ಎಂಬ ಗ್ರಾಮಕ್ಕೆ ನಡೆದುಕೊಂಡು ಹೋಗಬೇಕು. ಖಾಸಗಿ ವಾಹನವಿದ್ದರೆ ಗ್ರಾಮದವರೆಗೂ ಹೋಗಬಹುದು. ನಂತರ ಮಾರ್ಗ ಮಧ್ಯದಲ್ಲಿ ಹರಿಯುವ ಭದ್ರಾ ನದಿಯನ್ನು ದೋಣಿ ಅಥವಾ ಉಕ್ಕಡದ ಮೂಲಕ ದಾಟಬೇಕಾಗುತ್ತದೆ. ಪ್ರತಿದಿನವೂ ಈ ಕ್ಷೇತ್ರಕ್ಕೆ ಹೋಗಲು ಅವಕಾಶವಿರುವುದಿಲ್ಲ. ಏಕೆಂದರೆ ಅಭಯಾರಣ್ಯ ಪ್ರದೇಶ, ಹಾಗಾಗಿ ಜಾತ್ರೋತ್ಸವ ನಡೆಯುವ ನಾಲ್ಕು ದಿನಗಳ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅನುಮತಿ ಇರುವುದರಿಂದ ಈ ಸ್ಥಳಕ್ಕೆ ಹೋಗಲು ಅವಕಾಶವಿರುತ್ತದೆ.