Advertisement

ದಿಲ್ಲಿ-ಹಿಮಾಚಲದಲ್ಲಿ ವರುಣಾರ್ಭಟ; ಹಿಮಾಚಲದಲ್ಲಿ ತೀವ್ರ ಹಿಮಪಾತ, ಜನಜೀವನ ಅಸ್ತವ್ಯಸ್ತ

12:53 AM Apr 01, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಬಿಸಿಲಿನ ಬೇಗೆಯ ನಡುವೆಯೇ ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಶುಕ್ರವಾರವೂ ವರುಣಾರ್ಭಟ ಮುಂದು ವರಿದಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲೂ ಮಳೆಯಾಗಿದ್ದು, ಶನಿವಾ ರವೂ ಮಳೆಯಾಗುವ ಸಾಧ್ಯತೆಗಳಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

Advertisement

ಯಮುನಾನಗರ, ಕುರುಕ್ಷೇತ್ರ, ಕರ್ನಾಲ್‌, ಅಸ್ಸಾಂದ್‌, ರೋಹrಕ್‌, ನಸೀಯಾಬಾದ್‌ ಸಹಿತ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾದ ಹಿನ್ನೆಲೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮತ್ತೆ ಮಳೆ ಮುಂದುವರಿದ ಕಾರಣ, ರಸ್ತೆಗಳಲ್ಲಿ ನೀರು ತುಂಬಿ, ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಗುರುವಾರ ಕೂಡ ತೀವ್ರ ಮಳೆಯಿಂದ ದಿಲ್ಲಿಯಲ್ಲಿ 22 ವಿಮಾನಗಳ ಮಾರ್ಗ ಬದಲಿಸಲಾಗಿತ್ತು.

ಇನ್ನು ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲೂ ಮಳೆ ಜತೆಗೆ ಹಿಮಪಾತವಾಗಿದೆ. ಎಪ್ರಿಲ್‌1-2ರಂದು ಮತ್ತಷ್ಟು ಹಿಮಪಾತ ಹಾಗೂ ಮಳೆ ಹೆಚ್ಚಾಗುವ ಸಾಧ್ಯತೆ ಹಿನ್ನಲೆ ಐಎಂಡಿ ಹಳದಿ ಅಲರ್ಟ್‌ ಘೋಷಿಸಿದೆ.

ಹಿಮಾಚಲದಲ್ಲಿ ತೀವ್ರ ಹಿಮಪಾತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಾದ ಎನ್‌-3ಹಾಗೂ ಎನ್‌-505 ಸಹಿತ 11 ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next