ಚಿಕ್ಕೋಡಿ: ಮಹಾರಾಷ್ಟ್ರ, ಕೊಂಕಣ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇತ್ತ ರಾಜ್ಯದ ಗಡಿ ಭಾಗದಲ್ಲಿಯೂ ಮಳೆ ಮುಂದುವರೆದಿರುವ ಪರಿಣಾಮ ಕೃಷ್ಣಾ. ದೂಧಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಕೊಂಕಣ ಭಾಗದ ಕೋಯ್ನಾ, ಮಹಾಬಳೇಶ್ವರ, ನವಜಾ, ವಾರಣಾ, ಕಾಳಮ್ಮವಾಡಿ ಪ್ರದೇಶದಲ್ಲಿ ಕಳೆದ 24 ಗಂಟೆಯಲ್ಲಿ ಭಾರಿ ಮಳೆ ಸುರಿದಿದೆ. ಕೃಷ್ಣಾ ಮತ್ತು ದೂಧಗಂಗಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರಲಾರಂಭಿಸಿದೆ.
ಕೃಷ್ಣಾ ಮತ್ತು ಉಪನದಿಗಳಿಗೆ 70 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರಲಾರಂಬಿಸಿದೆ. ಹೀಗಾಗಿ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿಬಾಬಾ ದೇವಸ್ಥಾನ ದೂಧಗಂಗಾ ನದಿ ನೀರಿನಲ್ಲಿ ಜಲಾವೃತಗೊಂಡಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಶ್ರೀ ದತ್ತಮಂದಿರ ಕೃಷ್ಣಾ ನದಿ ನೀರಿನಲ್ಲಿ ಜಲಾವೃತಗೊಂಡಿದೆ.
ಇಲ್ಲಿಯವರಿಗೆ ಚಿಕ್ಕೋಡಿ ಉಪವಿಭಾಗದ ಐದು ಸೇತುವೆಗಳು ಮುಳುಗಡೆಗೊಂಡು ಸಂಚಾರ ಕಡಿತಗೊಂಡಿದೆ.
ಇದನ್ನೂ ಓದಿ: Daily Horoscope: ಅನಿರೀಕ್ಷಿತ ಧನಾಗಮ ಸಂಭವ, ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು