ಪುತ್ತೂರು/ ಸುಳ್ಯ/ ಕಡಬ: ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಸೋಮವಾರ ಸಂಜೆ ಸುಮಾರು 2 ತಾಸು ಕಾಲ ಭಾರೀ ಮಳೆಯಾಗಿದೆ. ಭಾರೀ ಮಳೆ ಯಿಂದಾಗಿ ಪಯಸ್ವಿನಿ ನದಿಯಲ್ಲಿ ನೀರು ಒಮ್ಮಿಂದೊಮ್ಮೆಗೆ ಉಕ್ಕಿ ಹರಿ ದಿದೆ. ಕೆಸರು ಮಿಶ್ರಿತ ನೀರು ತುಂಬಿ ಹರಿದಿದ್ದು ಕಲ್ಲುಗುಂಡಿ ಪೇಟೆಯ ಕೂಲಿ ಶೆಡ್ ಬಳಿಯಲ್ಲಿ ತಗ್ಗು ಪ್ರದೇಶಗಳಿಗೆ ನದಿಯ ನೀರು ನುಗ್ಗಿದೆ.
ನದಿಯ ನೀರು ರಾಷ್ಟ್ರೀಯ ಹೆದ್ದಾರಿಯ ಮಟ್ಟಕ್ಕೆ ಬಂದಿದ್ದು, ಕೆಲವು ಮನೆಗಳಿಗೆ ಮತ್ತು ಹೊಟೇಲ್‌ಗಳಿಗೆ ನುಗ್ಗಿದೆ. ಸ್ಥಳಕ್ಕೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲ್ಮಡ್ಕ, ಎಣ್ಮೂರು, ಕೋಟೆ ಮುಂಡುಗಾರು, ಪುತ್ತೂರು ತಾಲೂಕಿನ ಕುಂಬ್ರ, ನರಿಮೊಗರು ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
ಮಳೆಯಿಂದಾಗಿ ವಿದ್ಯಾರ್ಥಿಗಳು ಮನೆ ಸೇರಲು ತ್ರಾಸ ಪಡುವಂತಾ ಯಿತು. ಕಡಬದಲ್ಲಿ ಕೃಷಿ ತೋಟಗಳಿಗೆ ಮಳೆನೀರು ನುಗ್ಗಿ ಅಡಿಕೆ, ತೆಂಗಿನಕಾಯಿ ನೀರುಪಾಲಾಗಿವೆ.
ಇದನ್ನೂ ಓದಿ:12ರ ವರೆಗೂ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ತಾಪಮಾನ
ಮಂಗಳೂರು: ಐಎಂಡಿ ಮಾಹಿತಿ ಯಂತೆ ಸೋಮವಾರ ಮಂಗಳೂರಿನಲ್ಲಿ 30.4 ಡಿ.ಸೆ. ಗರಿಷ್ಠ ಮತ್ತು 23.5 ಡಿ.ಸೆ. ಕನಿಷ್ಠ ತಾಪಮಾನ ಇತ್ತು.