Advertisement

ಕುಂದಾಪುರ ವಿವಿಧೆಡೆ ಭಾರೀ ಮಳೆ : ಜಲಾವೃತ

08:57 AM Jul 25, 2019 | sudhir |

ತೆಕ್ಕಟ್ಟೆ: ನಿರಂತರವಾಗಿ ಸುರಿದ ಭಾರೀ ಮಳೆಗೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ತೋಟದಬೆಟ್ಟು,ಕುಂಭಾಸಿ ಕೊರವಡಿ ಹೊಳೆಕಟ್ಟು, ಬೇಳೂರು, ಮೊಗೆಬೆಟ್ಟು, ಮಲ್ಯಾಡಿ, ಉಳ್ತೂರು, ಹೆಸ್ಕಾತ್ತೂರು, ಕೊರ್ಗಿ ಗ್ರಾಮೀಣ ಭಾಗದ ತಗ್ಗು ಪ್ರದೇಶದಲ್ಲಿ ಮಳೆಯ ನೀರಿನ ಪ್ರಮಾಣ ಏರಿಕೆ ಕಂಡಿದ್ದು, ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಮಲ್ಯಾಡಿ ದಲಿತ ಕಾಲನಿಯ ದಾಸ ಹಾಗೂ ಕೃಷ್ಣ ಎನ್ನುವವರ ಮನೆ ಸುತ್ತಲೂ ನೀರು ಆವರಿಸಿದೆ.

Advertisement

ಕೆದೂರು ಗ್ರಾ.ಪಂ. ವ್ಯಾಪ್ತಿಯ ಉಳ್ತೂರು, ಹಲ್ತೂರು ಭಾಗಗಳಲ್ಲಿ ನೂರಾರು ಎಕರೆ ಕೃಷಿಭೂಮಿಗಳಿಗೆ ನೀರು ಆವರಿಸಿದೆ. ಬೇಳೂರು ಗ್ರಾ.ಪಂ. ವ್ಯಾಪ್ತಿಯ ಬೇಳೂರು ದೇವಸ್ಥಾನ ಬೆಟ್ಟು, ಬಡಾಬೆಟ್ಟು ಹಾಗೂ ದೇಲಟ್ಟು ಭಾಗದಲ್ಲಿ ಇತ್ತೀಚೆಗಷ್ಟೇ ನಾಟಿ ಕಾರ್ಯ ಪೂರ್ಣಗೊಂಡಿರುವ ನೂರಾರು ಎಕರೆ ಕೃಷಿ ಭೂಮಿಗಳು ಸಂಪೂರ್ಣ ಜಲಾವೃತಗೊಂಡಿದೆ ಎಂದು ಹಿರಿಯ ಕೃಷಿಕ ಮಂಜ ಮಡಿವಾಳ ಪತ್ರಿಕೆಗೆ ತಿಳಿಸಿದ್ದಾರೆ.

ಅಂತರಗಂಗೆಗಳ ರಾಶಿ
ಹೊಳೆ ಸಾಲು ಭಾಗಗಳಲ್ಲಿ ನೀರಿನ ಒಳ ಹರಿವು ಅಧಿಕವಾಗಿರುವ ಪರಿಣಾಮ ಉಳ್ತೂರು ಕಿಂಡಿ ಅಣೆಕಟ್ಟಿನ ಸಮೀಪದಲ್ಲಿ ರಾಶಿ ರಾಶಿ ಅಂತರಗಂಗೆಗಳು ಒಂದೆಡೆಗೆ ಬಂದು ಶೇಖರಣೆಯಾಗಿರುವ ದೃಶ್ಯಗಳು ಕಂಡು ಬಂತು.
Advertisement

Udayavani is now on Telegram. Click here to join our channel and stay updated with the latest news.

Next