Advertisement

ಧಾರಾಕಾರ ಮಳೆ: ಹಲವೆಡೆ ಬಸ್‌ ಸಂಚಾರ ಸ್ತಬ್ದ

02:01 AM Aug 11, 2019 | Team Udayavani |

ಉಡುಪಿ: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ, ಬೆಂಗಳೂರು, ಮೈಸೂರು ಭಾಗಗಳಿಗೆ ಹೋಗುವ 40 ಬಸ್‌ಗಳು ಕೆಸ್ಸಾರ್ಟಿಸಿ ಡಿಪೋದಲ್ಲಿ ನಿಲುಗಡೆಯಾಗಿವೆ.

Advertisement

ಸದ್ಯಕ್ಕೆ ಬೆಂಗಳೂರಿಗೆ
ಒಂದೇ ಮಾರ್ಗ
ಬೆಂಗಳೂರಿಗೆ ತೆರಳುವ ನಾಲ್ಕೂ ಮಾರ್ಗಗಳು ಬಂದ್‌ ಆಗಿದ್ದು, ಸದ್ಯಕ್ಕೆ ಕೊಲ್ಲೂರು – ಹೊಸನಗರ, ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತಲುಪು ವಂತಹ ಒಂದೇ ಆಯ್ಕೆಯಿದೆ. ಉಳಿದಂತೆ ಯಲ್ಲಾಪುರ, ಚಾರ್ಮಾಡಿ, ಮೈಸೂರು, ವಿಜಯಪುರ, ಜಮಖಂಡಿ, ಹುಬ್ಬಳ್ಳಿ, ಧಾರವಾಡ ಮಾರ್ಗಗಳು ಸಂಪೂರ್ಣ ಬಂದ್‌ ಆಗಿದ್ದು, ಪ್ರಯಾಣ ಕಷ್ಟಕರವಾಗಿದೆ.

ಟಿಕೆಟ್‌ ಹಣ ರೀಫ‌ಂಡ್‌
ಈಗಾಗಲೇ ಮುಂಗಡ ಟಿಕೆಟ್‌
ಕಾದಿರಿಸಿರುವವರು ಬಸ್‌ ಸಂಚಾರ ಸ್ಥಗಿತದಿಂದ ತೊಂದರೆಗೊಳಗಾಗಿ ದ್ದಾರೆ. ಅವರಿಗೆ ಟಿಕೆಟ್‌ ಹಣವನ್ನು ಮರಳಿಸುವುದಾಗಿ ಕೆಎಸ್ಸಾರ್ಟಿಸಿ ತಿಳಿಸಿದೆ.

ಈ ಪ್ರಕ್ರಿಯೆ ಒಂದೆರಡು ದಿನ ವಿಳಂಬವಾಗಬಹುದು. ಆದರೆ ಟಿಕೆಟ್‌ ಹಣದಲ್ಲಿ ಕಡಿತ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

ಇರುವ ಬಸ್‌ಗಳೂ ವಿಳಂಬ
ಸದ್ಯಕ್ಕೆ ಓಡಾಟ ನಡೆಸುತ್ತಿರುವ ಬಸ್‌ಗಳ ಸಮಯದಲ್ಲೂ ವ್ಯತ್ಯಯ ವಾಗಿದೆ. ನಿಗದಿತ ಸಮಯಕ್ಕೆ ತಲುಪ ಲಾಗುತ್ತಿಲ್ಲ. ಪ್ರಯಾಣಿಕರು ಪದೇ ಪದೇ ಬಸ್‌ ಸಮಯ ಕೇಳುತ್ತಿದ್ದಾರೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಬಸ್ಸು ನಿರ್ವಾಹಕರು.

Advertisement

ಮಳೆ ಬಂದು ರಸ್ತೆ ಬಂದ್‌ ಆದರೆ ಅರ್ಧದಲ್ಲಿ ಸಂಚಾರ ಮೊಟಕುಗೊಳಿ ಸಬೇಕಾಗುತ್ತದೆ. ಹಿಂದಿರುಗಿ ಬಂದರೂ ನಮ್ಮ ವೇಳಾಪಟ್ಟಿ ಬದಲಾಗುತ್ತದೆ ಎನ್ನುತ್ತಾರೆ ಉಡುಪಿ-ಹುಬ್ಬಳ್ಳಿ ಬಸ್‌ ನಿರ್ವಾಹಕ ಹನುಮಂತ.

ಬೆಂಗಳೂರಿನಿಂದ ಬಂದಿದ್ದೇವೆ
ಮಂಗಳೂರಿನಲ್ಲಿ ಸಂದರ್ಶನಕ್ಕೆಂದು ಬಂದಿದ್ದೇವೆ. ಉಡುಪಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದು, ಶುಕ್ರವಾರವೇ ಕೆಲಸಕ್ಕೆ ಹಾಜರಾಗಬೇಕಿತ್ತು. ಮೊನ್ನೆ ಟಿಕೆಟ್‌ ಸಿಗಲಿಲ್ಲ. ಇವತ್ತು ರಸ್ತೆಯೇ ಬಂದ್‌ ಆಗಿದೆ.
-ಶೀತಲ್‌ ಶೆಟ್ಟಿ, ಪ್ರಯಾಣಿಕರು

ಅರ್ಧದಾರಿ ಪಯಣ
ರಸ್ತೆ ದುರಸ್ತಿಯಿದ್ದರೂ ಕೆಲವು ಪ್ರಯಾಣಿಕರು ಸಹಕರಿಸುತ್ತಿಲ್ಲ. ಈ ಕಾರಣಕ್ಕಾಗಿ ನಾವು ಬಸ್‌ ಸಂಚಾರವನ್ನೇ ಸ್ಥಗಿತಗೊಳಿಸಿದ್ದೇವೆ. ಅರ್ಧ ದಾರಿವರೆಗೆ ಹೋಗಿ ವಿನಾ ಕಾರಣ ಹಿಂತಿರುಗಬೇಕಾಗುತ್ತದೆ. ನಿಲ್ದಾಣದಲ್ಲಿರುವ ಪ್ರಯಾಣಿಕರೂ ಪದೇ ಪದೇ ಬಹ್‌ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ರಸ್ತೆ ದುರಸ್ತಿಯಾಗದ ವಿನಾ ಸಂಚಾರ ಕಷ್ಟಕರ.
-ರುದ್ರೇಶ್‌, ಬಸ್ಸು ನಿರ್ವಾಹಕರು

Advertisement

Udayavani is now on Telegram. Click here to join our channel and stay updated with the latest news.

Next