Advertisement
ಹೌದು ಗಂಗಾವಳಿ ನದಿ ಹಿಂದೆಂದು ಕಂಡರೀಯದ ರೌದ್ರಾವತಾರಕ್ಕೆ ಅಂಕೋಲಾ ತಾಲೂಕಿನ ಭಾಗಶಃ ನಲುಗಿ ಹೋಗಿದೆ. ಕಳೆದ ಆರು ದಿನಗಳಿಂದ ಸಂಭವಿಸಿದ ಪ್ರವಾಹದಿಂದ ಎಲ್ಲೆಡೆ ತುಂಬಿಕೊಂಡಿರುವ ನೀರು ನಿಧಾನಗತಿಯಲ್ಲಿ ಸಾಗರದೊಡಲಿಗೆ ಸೇರುತ್ತಿದೆ. ಇತ್ತ ಮನೆ ತೊರೆದು ಬಂದ ಜನ ಮನೆಯತ್ತ ಮುಖ ಮಾಡಿ ಹೊರಟರೆ ಕೆಲವೆಡೆ ಮನೆಯ ಅವಶೇಷ ಮಾತ್ರ ಕಂಡು ಜನ ಕಣ್ಣೀರಿಡುತ್ತಿದ್ದಾರೆ.
ನೆರೆ ಪ್ರದೇಶದಲ್ಲಿ ಚಿಕಿತ್ಸೆ: ಆರೋಗ್ಯ ಇಲಾಖೆಯಿಂದ ಪ್ರತಿಯೊಂದು ನೆರೆ ಪ್ರದೇಶದಲ್ಲಿ ಪ್ರತಿಯೊಬ್ಬರ ಆರೋಗ್ಯ ಚಿಕಿತ್ಸೆ ಮಾಡಲಾಗುತ್ತಿದೆ. ನೆರೆಯಿಂದ ಹರಡಬಹುದಾದ ಸಾಂಕ್ರಾಮಿಕ ರೋಗಗಳ ಕುರಿತು ಮುನ್ನೆಚ್ಚರಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ, ತಾಲೂಕಿನ ಸಂಘ ಸಂಸ್ಥೆಗಳು ಪ್ರತಿಯೊಂದು ನೆರೆ ಪೀಡಿತ ಪ್ರದೇಶದಲ್ಲಿ ಔಷಧಗಳನ್ನು ಪೂರೈಸುತ್ತಿದೆ.
ನೆರೆ ಭೀತಿ: ಕರಾವಳಿ ತೀರದಲ್ಲಿ ಮಳೆ ಕಡಿಮೆ ಆಗಿದೆ. ಮಲೆನಾಡು ಭಾಗವಾದ ಯಲ್ಲಾಪುರ ಮುಂಡಗೋಡ ತಾಲೂಕಿನಲ್ಲಿ ಮಳೆ ಸುರಿಯುತ್ತಿದ್ದರೆ ಮತ್ತೆ ಗಂಗಾವಳಿ ನೆರೆ ಭೀತಿ ಎದುರಾಗುತ್ತದೆ. ಮಲೆನಾಡಿನಲ್ಲಿ ಮಳೆಯು ಆಗಾಗ ಸುರಿಯುತ್ತಿದ್ದು ತಮ್ಮ ತಮ್ಮ ಮನೆಗಳಿಗೆ ಸೇರಿಕೊಂಡಿರುವ ಜನರಲ್ಲಿ ನೆರೆ ಭೀತಿಲ್ಲಿಯೆ ನಿದ್ದೆಗೆಟ್ಟು ಕಾಲ ಕಳೆಯುವಂತಾಗಿದೆ. ತಾಲೂಕಾಡಳಿತ ನೆರೆ ಪೀಡಿತ ಪ್ರದೇಶಗಳಲ್ಲಿ ಮುಂದಿನ ಎರಡು ದಿನವು ನೆರೆಯ ಮುನ್ನೆಚ್ಚರಿಕೆ ನೀಡಿದ್ದಾರೆ.
Related Articles
Advertisement