ಹುಣಸೂರು: ತಾಲೂಕಿನಾದ್ಯಂತ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ನೀರು ನುಗ್ಗಿ, ಸಾಕಷ್ಟು ಹಾನಿಯುಂಟು ಮಾಡಿದೆ.
ನಗರದ ಮಂಜುನಾಥ ಬಡಾವಣೆ, ಸಾಕೇತ ಬಡಾವಣೆ ಹಾಗೂ ನ್ಯೂ ಮಾರುತಿ ಬಡಾವಣೆಯ ಕೆಲ ಮನೆಗಳಿಗೆ ನೀರು ನುಗ್ಗಿ ಮನೆಯೊಳಗಿದ್ದ ಸಾಮಾಗ್ರಿಗಳು ಕೊಚ್ಚಿಹೋಗಿದೆ.
ಚಿಲ್ಕುಂದದಲ್ಲಿ ಸಿಡಿಲಿಗೆ ವೆಂಕಟರಾಮಯ್ಯ ಹಾಗೂ ರಘುನಾಥ ಎಂಬವರಿಗೆ ಸೇರಿದ 50 ಕ್ಕೂ ಹೆಚ್ಚು ಅಡಿಕೆ, ತೆಂಗಿನ ಮರಕ್ಕೆ ಹಾನಿಯುಂಟಾಗಿದ್ದು, ಬಹುತೇಕ ಕಡೆಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು. ಚೆಸ್ಕಾಂ ಸಿಬ್ಬಂದಿಗಳು ರಾತ್ರಿಯೇ ಅಲ್ಲಲ್ಲಿ ದುರಸ್ಥಿಗೊಳಿಸಿದ್ದಾರೆ.
ಇದನ್ನೂ ಓದಿ:ಕೆಲಸಕ್ಕೆ ಸೇರಿದ ಮೊದಲ ದಿನವೇ ಮಹಿಳೆ ಶವವಾಗಿ ಪತ್ತೆ: ಅತ್ಯಾಚಾರ ಆರೋಪ!
ಹಾನಿಯುಂಟಾದ ಸ್ಥಳಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಮುಂಜಾನೆಯಿಂದಲೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.