Advertisement
ಸುಬ್ರಹ್ಮಣ್ಯ, ಕಡಬ ಮತ್ತು ಸುತ್ತಲ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ವೇಳೆಗೆ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆಯಾಗಿದೆ. ಜತೆಗೆ ಆಲಿಕಲ್ಲು ಕೂಡ ಬೃಹತ್ ಪ್ರಮಾಣದಲ್ಲಿ ಬಿದ್ದಿವೆ. ಗಾಳಿ ಕೂಡ ಹೆಚ್ಚಿದ್ದು, ಬಿರುಸಾಗಿ ಬೀಸಿದ ಗಾಳಿಗೆ ಹಲವೆಡೆ ಮರಗಳು ಧರೆಶಾಯಿಯಾಗಿವೆ. ಅನೇಕ ಮಂದಿ ಕೃಷಿಕರ ರಬ್ಬರ್, ತೆಂಗು, ಅಡಿಕೆ ಮರ ಗಳು ನೆಲಕ್ಕುರುಳಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
Related Articles
ಬೆಳ್ಳಾರೆ, ಪೆರುವಾಜೆ ಗ್ರಾಮ ಗಳಲ್ಲಿ ಭಾರೀ ಗಾಳಿ ಸಹಿತ ಮಳೆ ಯಾಗಿದ್ದು, ಹಲವು ಅಡಿಕೆ ತೋಟ ಮನೆಗಳಿಗೆ ಹಾನಿಯಾಗಿವೆ ಪುತ್ತೂರು ಪರಿಸರದಲ್ಲಿ 15 ನಿಮಿಷ ಉತ್ತಮ ಮಳೆಯಾಗಿದೆ. ಈವರೆಗೆ ಯಾವುದೇ ಅವಘಡ ವರದಿಯಾಗಿಲ್ಲ.
ಸುಬ್ರಹ್ಮಣ್ಯ ಆಸುಪಾಸಿನ ಭಾಗದಲ್ಲಿ ಬೇಸಗೆಯ ಈ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಗಾಳಿ ಮಳೆಯಾಗಿದ್ದು ಬಿಸಿಲ ತಾಪದಿಂದ ಕಾದಿದ್ದ ಇಳೆ ತಂಪಾಗಿದೆ. ಹಲವು ಮಂದಿ ಆಲಿಕಲ್ಲುಗಳನ್ನು ಸಂಗ್ರಹಿಸುತ್ತ, ಇನ್ನೂ ಕೆಲವರು ಮೊಬೈಲ್‌ಗಳಲ್ಲಿ ಚಿತ್ರೀಕರಣ ಮಾಡುತ್ತ ಖುಶಿಪಟ್ಟರು.
Advertisement
ಸಂಚಾರ ವ್ಯತ್ಯಯಮರ್ದಾಳದಿಂದ ನೆಟ್ಟಣ ಮಧ್ಯದಲ್ಲಿ ಬೃಹತ್ ಗಾತ್ರದ ಮರಗಳು ಮುರಿದು ರಸ್ತೆಗೆ ಬಿದ್ದು ಸಂಚಾರ ಬಾಧಿತವಾಯಿತು. ಉಪ್ಪಿನಂಗಡಿ, ಧರ್ಮಸ್ಥಳಗಳಿಂದ ಸುಬ್ರಹ್ಮಣ್ಯಕ್ಕೆ ತೆರಳುವವರು ಸಮಸ್ಯೆ ಎದುರಿಸುವಂತಾಯಿತು. ಮಂಗಳೂರು ನಗರದಲ್ಲಿ ಸೆಕೆಯಿಂದ ಕೂಡಿತ್ತು. ಸಂಜೆ ವೇಳೆಗೆ ಮೋಡಕ ಕವಿದ ವಾತಾವರಣ ಇತ್ತು. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕೈಕೊಟ್ಟಿತ್ತು.
ಕಾಸರಗೋಡು: ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಮಳೆಯಾಗಿದೆ. ಪಳ್ಳ, ಏಳಾRನ, ಮಧೂರು ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಹವಾಮಾನ ಮುನ್ಸೂ ಚನೆ ಪ್ರಕಾರ ಮುಂದಿನ 2 ದಿನಗಳಲ್ಲಿ ಕರಾವಳಿಯಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ.