Advertisement
ಗುರುವಾರದಂದು ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರಕ್ಕೆ ಈ ಜಿಲ್ಲೆಗಳ ಜತೆ ಪತನಂತ್ತಿಟ್ಟ ಜಿಲ್ಲೆಗೂ ಆರೆಂಜ್ ಅಲರ್ಟ್ ಇರಲಿದೆ. ಹಾಗೆಯೇ ಶನಿವಾರದಂದು ಈ ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮೇ 28ರ ವರೆಗೆ ರಾಜ್ಯದಲ್ಲಿ ದಿನಕ್ಕೆ 7-11ಸೆಂ.ಮೀ.ವರೆಗೆ ಮಳೆ ವರದಿಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಕರ್ನಾಟಕಕ್ಕೂ ಎಚ್ಚರಿಕೆ: ಕರ್ನಾಟಕ, ಲಕ್ಷದ್ವೀಪ, ಆಂಧ್ರಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಪುದು ಚೆರಿಯಲ್ಲಿಯೂ ಮೇ 29ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೇರಳ ಮತ್ತು ತಮಿಳು ನಾಡಿನಲ್ಲಿ ಮೇ 26 ರಂದು ಭಾರೀ ಮಳೆ ಯಾಗುವ ಸಾಧ್ಯತೆ ಯಿದೆ. ಅದೇ ದಿನ ಕರ್ನಾಟಕ, ಅರುಣಾ ಚಲ ಪ್ರದೇಶ, ಅಸ್ಸಾಂ, ಮೇಘಾಲಯ,ಪಶ್ಚಿಮ ಬಂಗಾಲ ಮತ್ತು ತಮಿಳುನಾಡಿನಲ್ಲಿ ಗುಡುಗು ಸಹಿತ ಮಳೆ ಯಾಗಲಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ದಿಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಮೇ 28 ಮತ್ತು 29ರಂದು ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.
Related Articles
Advertisement
ಈಶಾನ್ಯಕ್ಕೆ ಪೂರ್ವ ಮುಂಗಾರು ಬಂಪರ್ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಪೂರ್ವ ಮುಂಗಾರು ಮಳೆಯಾಗಿದೆ. 2018ರಿಂದ ಈ ರಾಜ್ಯಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪೂರ್ವ ಮುಂಗಾರು ಸುರಿಯುತ್ತಿತ್ತು. ಆದರೆ ಈ ಬಾರಿ ದಾಖಲೆಯ ಪ್ರಮಾಣ ದಲ್ಲಿ ಮಳೆ ಸುರಿದಿದೆ ಎಂದು ಪ್ರಾದೇಶಿಕ ಐಎಂಡಿ ಕಚೇರಿಗಳು ವರದಿ ಮಾಡಿವೆ.