Advertisement

ಜಿಟಿಜಿಟಿ ಮಳೆಗೆ ರಸ್ತೆ ಕೆಸರುಮಯ

05:29 PM Jul 12, 2022 | Team Udayavani |

ಜೇವರ್ಗಿ: ತಾಲೂಕಿನ ಬಿರಾಳ ಬಿ. ಗ್ರಾಮದಿಂದ ಹೊನ್ನಾಳ ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆ ಜಿಟಿಜಿಟಿ ಮಳೆಗೆ ಕೆಸರು ರಾಡಿಯಂತ್ತಾಗಿದ್ದು, ಸಂಚಾರಕ್ಕೆ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಪಂ ಕೇಂದ್ರವಾಗಿರುವ ಬಿರಾಳ ಬಿ. ಗ್ರಾಮದಲ್ಲಿ 4 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ.

Advertisement

ಗ್ರಾಮದಿಂದ ಹೊನ್ನಾಳ, ಹೋತಿನಮಡು, ರಾಂಪೂರ ಹಾಗೂ ಶಹಾಪೂರ ತಾಲೂಕಿನ ಅಣಬಿ, ಹೊಸೂರ, ಯಾದಗಿರಿ ಜಿಲ್ಲೆಗೆ ತೆರಳುವ ಮುಖ್ಯ ರಸ್ತೆಯಾಗಿದೆ. ನಿತ್ಯ ಹತ್ತಾರು ವಾಹನಗಳು ಈ ರಸ್ತೆ ಮೂಲಕ ಸಂಚಾರ ಮಾಡುತ್ತವೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ರಸ್ತೆ ಕೆಸರು ಗದ್ದೆಯಾಗಿ ಸಂಚಾರಕ್ಕೆ ಸಂಚಕಾರ ತಂದಿದೆ. ಕನಕದಾಸ ಚೌಕ್‌ದಿಂದ ಅಂಬೇಡ್ಕರ್‌ ನಗರಕ್ಕೆ ತೆರಳುವ ಈ ರಸ್ತೆ ತುಂಬಾ ಹದಗೆಟ್ಟು ಹೋಗಿರುವುದರಿಂದ ಈ ಎರಡು ಬಡಾವಣೆಯ ಜನ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.

ಮಹಿಳೆಯರು, ಮಕ್ಕಳು, ವೃದ್ದರು ಕೆಸರು ರಸ್ತೆಯಿಂದ ಮನೆಬಿಟ್ಟು ಹೊರಬರದಂತಾಗಿದೆ. ಬಸ್‌ ಹೊರತುಪಡಿಸಿ ಬೇರೆ ವಾಹನಗಳು ಈ ರಸ್ತೆ ಮೇಲೆ ಓಡಾಡುವಂತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಗಳಿಗೆ, ಅಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ರಸ್ತೆ ನಿರ್ಮಾಣಕ್ಕೆ ಮುಂದಾಗದೇ ಹೋದರೇ ಗ್ರಾಮಸ್ಥರೊಂದಿಗೆ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮದ ನಿವಾಸಿ ಹಣಮಂತ ಕುಳಗೇರಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next