Advertisement

ಹುಲಿಕೆರೆ ಭರ್ತಿ; ಒಂದೆಡೆ ಸಂತಸ, ಮತ್ತೊಂದೆಡೆ ಮನೆಗಳಿಗೆ ನುಗ್ಗಿದ ನೀರು; ಸಂಕಷ್ಟಕ್ಕೀಡಾದ ಜನ

03:11 PM Oct 22, 2024 | Team Udayavani |

ಕಾನಾಹೊಸಹಳ್ಳಿ/ ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹುಲಿಕೆರೆ ಕೆರೆ 55 ವರ್ಷಗಳ ನಂತರ ಭರ್ತಿಯಾಗಿ ಕಳೆದ 3 ದಿನಗಳಿಂದ ಕೋಡಿಯ ಮೇಲೆ ನೀರು ಹರಿಯುತ್ತಿದ್ದು, 5 ದಶಕಗಳ ನಂತರ ಕೆರೆ ತುಂಬಿರುವುದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

Advertisement

ಆದರೆ ಮತ್ತೊಂದೆಡೆ ಕೆರೆಗೆ ಹೊಂದಿಕೊಂಡಿರುವ ಖಾವಯಾ ರಸ್ತೆ ಹಾಗೂ ಅನೇಕ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರು ಮನೆಗಳನ್ನು ತೊರೆಯುವ ಪರಿಸ್ಥಿತಿ ಎದುರಾಗಿದೆ. 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿರುವ ಅಗತ್ಯ ವಸ್ತುಗಳು ಹಾಳಾಗಿ ಹೋಗಿವೆ.

ಅನೇಕರು ಮನೆಯನ್ನು ತೊರೆದು ಸಂಬಂಧಿಕರ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಅನೇಕ ಕಣಗಳಿಗೆ ನೀರು ನುಗ್ಗಿದ ಪರಿಣಾಮ ಜಾನುವಾರುಗಳಿಗೆ  ಶೇಖರಣೆ ಮಾಡಿದ್ದ ಮೇವು ಸಂಪೂರ್ಣ ಹಾಳಾಗಿದ್ದು ಇನ್ನೂ ದನದ ಕೊಟ್ಟಿಗೆ ಸಂಪೂರ್ಣ ಜಲಾವೃತವಾಗಿವೆ.

ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಅಧಿಕಾರಿಗಳು ನಾಮಕಾವಸ್ತೆಗಷ್ಟೇ ಬಂದು ಹೋಗುತ್ತಿದ್ದು, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆರೋಪಿಸಿದ್ದರೆ. ಇದೇ ವಿಚಾರವಾಗಿ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ಮುಳುಗಡೆಯಾದ ಕುಟುಂಬಗಳಿಗೆ ವಾಸ ಮಾಡಲು ತಾತ್ಕಾಲಿಕವಾಗಿ ಸರಕಾರಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗುವುದು. ನಂತರ ಮುಂದಿನ ಸೂಕ್ತ ಕ್ರಮ ಗೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next