Advertisement

ನಾಶಿಕ್‌ನಲ್ಲಿ ಜಡಿ ಮಳೆ; 30ರ ಹರೆಯದ ರೈತ ಸಿಡಿಲಿಗೆ ಬಲಿ

11:49 AM Oct 09, 2017 | udayavani editorial |

ನಾಶಿಕ್‌ : ನಾಶಿಕ್‌ನಲ್ಲಿ ನಿನ್ನೆ ಭಾನುವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಆರಂಭವಾಗಿದ್ದ ಜಡಿ ಮಳೆ ತಡರಾತ್ರಿಯ ವರೆಗೂ ಮುಂದುವರಿದು ಸಿಡಿಲಿಗೆ ಒಬ್ಬ ರೈತ ಮೃತಪಟ್ಟಿರುವುದಾಗಿ ವರದಿಯಾಗಿದೆ. 

Advertisement

ಇಂದು ಸೋಮವಾರ ಬೆಳಗ್ಗೆ 8 ಗಂಟೆ ವರೆಗಿನ ಕಳೆದ 24 ತಾಸುಗಳ ಅವಧಿಯಲ್ಲಿ ನಾಶಿಕ್‌ ಜಿಲ್ಲೆಯಲ್ಲಿ 374.3 ಮಿ.ಮೀ. ಮಳೆಯಾಗಿರುವುದಾಗಿ ಹವಾಮಾನ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. 

ಈ 24 ತಾಸಿನ ಅವಧಿಯಲ್ಲಿ  ನಾಶಿಕ್‌ನ ಇಗತಪುರಿ ತೆಹಶೀಲ್‌ನಲ್ಲಿ 74 ಮಿ.ಮೀ, ದಿಂಡೋರಿ ತೆಹಶೀಲ್‌ನಲ್ಲಿ 40 ಮಿ.ಮೀ. ಮತ್ತು ತ್ರ್ಯಂಬಕೇಶ್ವರದಲ್ಲಿ 34 ಮಿ.ಮೀ. ಮಳೆಯಾಗಿದೆ.

ಸಿಡಿಲಾಘಾತಕ್ಕೆ ಗುರಿಯಾಗಿ ಮೃತಪಟ್ಟ 30ರ ಹರೆಯದ ರೈತನು ಚಿಂಚೋಹಾಲ್‌ ಗ್ರಾಮದವನೆಂದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next