Advertisement
ಸಂಜೆ 6 ಗಂಟೆಯಿಂದ ಆರಂಭ ಗೊಂಡ ಮಳೆಯಂತೂ ಒಂದೂವರೆ ಗಂಟೆಗೂ ಹೆಚ್ಚು ಕಾಲ ಬಂದಿದ್ದು, ಇದರಿಂದ ಕುಂದಾಪುರ ನಗರದ ಸರ್ವಿಸ್ ರಸ್ತೆಯು ಹಲವೆಡೆ ಹೊಳೆ ಯಂತಾಗಿತ್ತು. ಬಸ್ರೂರು ಮೂರುಕೈ, ಸಂತೆ ಮಾರುಕಟ್ಟೆ, ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣ ಎದುರು, ಹಂಗಳೂರು, ಸರ್ಜನ್ ಆಸ್ಪತ್ರೆ ಬಳಿ ಸರ್ವಿಸ್ ರಸ್ತೆ ಜಲಾವೃತಗೊಂಡಿತ್ತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಯಿತು.
ಕುಂದಾಪುರ ಭಾಗದ ನೂರಾರು ಹೆಕ್ಟೇರ್ ನಾಟಿ ಮಾಡಿರುವ ಗದ್ದೆಗಳು ಜಲಾವೃತಗೊಂಡಿವೆ. ನಾವುಂದದ ಸಾಲುºಡ, ಅರೆಹೊಳೆ, ನಾಡದ ಚಿಕ್ಕಳ್ಳಿ, ಕುದ್ರು, ಪಡುಕೋಣೆ, ಮರವಂತೆ, ಸೌಕೂರು, ಬಸ್ರೂರು ಭಾಗದಲ್ಲಿ 10 ದಿನಗಳಿಂದಲೂ ಗದ್ದೆಗಳು ಮುಳುಗಡೆಯಾಗಿದ್ದು, ಈ ಬಾರಿಯ ಬೆಳೆ ಕೈಗೆ ಸಿಗದ ಪರಿಸ್ಥಿತಿಯಿದೆ. ಕುಂದಾಪುರ ತಾಲೂಕಿನಲ್ಲಿ ಗಾಳಿ – ಮಳೆಯಿಂದಾಗಿ 10ಕ್ಕೂ ಮಿಕ್ಕಿಮನೆಗಳಿಗೆ ಮರ ಬಿದ್ದು, ಹಾನಿಯಾಗಿದೆ. ಜನ್ಸಾಲೆಯಲ್ಲಿ ಅಡಿಕೆ ಮರಗಳು ಬಿದ್ದಿವೆ.